Lokesh Book House

Lokesh Book House Krishnrajpet, Mandya district, Karnataka

25/10/2019

ಕೆ.ಆರ್.ಪೇಟೆ ಪಟ್ಟಣದಲ್ಲಿ ಎಂಜಿನಿಯರಿಂಗ್, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಲೋಕೇಶ್ ಬುಕ್ ಹೌಸ್ ವತಿಯಿಂದ 3 ಲಕ್ಷ ರೂ ಮೌಲ್ಯದ 2ಸಾವಿರಕ್ಕೂ ಹೆಚ್ಚು ಪುಸ್ತಕಗಳ ಉಚಿತ ವಿತರಣೆ...

ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ವಿತರಣೆ ಮಾಡಿರುವ ನಾರಾಯಣಗೌಡ ಬುಕ್ ಹೌಸ್ ಮಾಲೀಕ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಅವರನ್ನು ಹೂಗುಚ್ಚ ನೀಡಿ ಅಭಿನಂದಿಸಿದರು...

ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲವಾಗುವಂತೆ ಲಕ್ಷಾಂತರ ರೂಪಾಯಿಗಳ ಮೌಲ್ಯದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿಯ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿರುವ ಲೋಕೇಶ್ ಮತ್ತು ಸಹೋದರ ಸೋಮಣ್ಣ ಅವರ ಸಮಾಜಮುಖಿ ಕಾಳಜಿಯು ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದ ನಾರಾಯಣಗೌಡ ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಪುಸ್ತಕಗಳನ್ನು ಓದುವ, ಪುಸ್ತಕಗಳನ್ನು ಆತ್ಮೀಯ ಗೆಳೆಯರನ್ನಾಗಿ ಮಾಡಿಕೊಳ್ಳುವ ಕಳಕಳಿ ಹಾಗೂ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವ ಶ್ರೇಷ್ಠ ಸಾಧನೆ ಮಾಡಬೇಕು. ಮುಂದಿನ ದಿನಗಳಲ್ಲಿ ಲೋಕೇಶ್ ತಮ್ಮ ತಂದೆತಾಯಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಇನ್ನೂ ಹೆಚ್ಚಿನ ಸಮಾಜಸೇವೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.. ಈ ಸಂದರ್ಭದಲ್ಲಿ ಮುಖಂಡರಾದ ಕರ್ತೇನಹಳ್ಳಿ ಸುರೇಶ್, ಅಗ್ರಹಾರಬಾಚಹಳ್ಳಿ ಜಗಧೀಶ್, ಶಿವಕುಮಾರ್, ನಾರಾಯಣಗೌಡ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್, ಸಂತೋಷ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು...ಉಚಿತ ಎಂಜಿನಿಯರಿಂಗ್ ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಬಂದು ತಮ್ಮ ಶೈಕ್ಷಣಿಕ ವಿಕಾಸಕ್ಕೆ ಬೇಕಾದ ಪುಸ್ತಕಗಳು ಆಯ್ಕೆಮಾಡಿಕೊಂಡರು...

12/08/2019

ಆತ್ಮೀಯರೇ ನಮ್ಮ ಕನ್ನಡನಾಡಿನ ಉತ್ತರ ಭಾಗದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ಅನೇಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ತೊಂದರೆಯಲ್ಲಿದ್ದಾರೆ. ಇಂತಹವರ ನೆರವಿಗೆ ಸಹೃದಯಿ ಎಲ್ಲರೂ ಕೈಜೋಡಿಸಿ ಸಹಕಾರ ನೀಡಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಮನುಜನಾಗಿ ಹುಟ್ಟಿದ ಮೇಲೆ ಮಾನವೀಯ ನೆಲೆಯಲ್ಲಿ ಎಲ್ಲರೂ ಚಿಂತನೆ ನಡೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ತೊಂದರೆಗೊಳಗಾಗಿರುವ ನೆರೆ ಸಂತ್ರಸ್ಥರಿಗೆ ಕೈಲಾದ ಸಹಾಯ ಮಾಡಬೇಕೇಂಬ ತುಡಿತದೊಂದಿಗೆ ದಿನಾಂಕ :14-08-2019 ರಂದು ಸಂಜೆ ಕೆ.ಆರ್.ಪೇಟೆ ಪಟ್ಟಣದಿಂದ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದಿನ ಬಳಕೆಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ತಾವುಗಳು ನೀವು ಏನಾದರೂ ದಿನಬಳಕೆಯ ಸಾಮಗ್ರಿಗಳನ್ನು ಕೊಟ್ಟರೆ ತೆಗೆದುಕೊಂಡು ತೊಂದರೆಗೆ ಒಳಗಾದ ಸಂತ್ರಸ್ಥರಿಗೆ ತಲುಪಿಸಲಿದ್ದೇವೆ. ಇದಕ್ಕಾಗಿ ತಂಡ ರಚನೆ ಮಾಡಿಕೊಂಡು ಆಗಸ್ಟ್ 14 ರಂದು ಸಂಜೆ ಲೋಕೇಶ್ ಬುಕ್ ಹೌಸ್ ಆವರಣದಿಂದ ಹೊರಡಲಿದ್ದೇವೆ. ಈ ಸಮಯದಲ್ಲಿ ಅಥವಾ ಅದಕ್ಕಿಂತ ಮುಂಚೆ ಲೋಕೇಶ್ ಬುಕ್ ಹೌಸ್ ಕೆ.ಆರ್. ಪೇಟೆ. ಮಂಡ್ಯ ಜಿಲ್ಲೆ. ಇಲ್ಲಿಗೆ ಸಾಮಗ್ರಿಗಳನ್ನು ತಲುಪಿಸಬಹುದಾಗಿದೆ. ನಮ್ನದೇ ಗೂಡ್ಸ್ ವಾಹನ ಮೂಲಕ ಸಾಮಗ್ರಿಗಳನ್ನು ನಿಗಧಿತ ಸಮಯಕ್ಕೆ ತಲುಪಿಸುವ ಮೂಲಕ ತೊಂದರೆಯಲ್ಲಿರುವವರಿಗೆ ನೆರವಾಗೋಣ. ಬನ್ನಿ ಕೈಜೋಡಿಸಿ. ಹೆಚ್.ಆರ್.ಲೋಕೇಶ್. ಪುರಸಭೆ ಸದಸ್ಯರು/ ಅಧ್ಯಕ್ಷರು: ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ. ಕೆ.ಆರ್. ಪೇಟೆ. ಆರ್. ಸೋಮಶೇಖರ್. ಹಾಗೂ ಸಿಬ್ಬಂದಿ ವರ್ಗ: ಲೋಕೇಶ್ ಬುಕ್ ಹೌಸ್(ಲೋಕೇಶ್ ಎಂಟರ್ ಪ್ರೈಸಸ್) ಕೆ.ಆರ್.ಪೇಟೆ. ಮೊ: 9886502039/ 8904116674/ 8152849560

Hosaholalu sri lakshmi narayana swamy temple pic
18/12/2014

Hosaholalu sri lakshmi narayana swamy temple pic

Address

Main Road, Krishnarajpet
Mandya
571426

Opening Hours

Monday 8am - 9pm
Tuesday 8am - 9pm
Wednesday 8am - 9pm
Thursday 8am - 9pm
Friday 8am - 9pm
Saturday 8am - 9pm
Sunday 8am - 9pm

Telephone

08230263956

Website

Alerts

Be the first to know and let us send you an email when Lokesh Book House posts news and promotions. Your email address will not be used for any other purpose, and you can unsubscribe at any time.

Share

Category