Shri Siddeshwar Book House

Shri Siddeshwar Book House Shree siddeshwar book house has been organised more than 100+ exhibitions. we stock all good and i This publishing house has won many prestige.

Shree siddeshwar book house (book exhibition and sale) has set high standards in the field of book exhibition and sale. It has always sought to reach different strata of readers by organizing book exhibitions in Karnataka. Besides, in order to reach the commonest of readers it has been adopting innovative schemes and sales promotion activities. we stock all good and informative books in Kannada a

nd English ( and some of Hindi and Urdu books also includes). The organisation has, through its popular literary publications, gained the patronage of a large community of readers. Apart from having permanent sales outlets in Karnataka, it conducts book exhibitions all over the state. The whole-hearted encouragement extended by the readers has been a constant source of inspiration for all its activities.

ನಾಡಿನ ಹಿರಿಯ ಕವಿ ಕೆ.ಸಿ. ಶಿವಪ್ಪ ಅವರ ಚೌಪದಿಗಳ ಸಂಕಲನಗಳಿವು. ಎರಡೂ ಪುಸ್ತಕಗಳಲ್ಲಿ ತಲಾ 900 ಚೌಪದಿಗಳಿವೆ. '...ನಲಿವು' ಸಂಕಲನದಲ್ಲಿ ಸಂತೋಷದ...
24/01/2025

ನಾಡಿನ ಹಿರಿಯ ಕವಿ ಕೆ.ಸಿ. ಶಿವಪ್ಪ ಅವರ ಚೌಪದಿಗಳ ಸಂಕಲನಗಳಿವು. ಎರಡೂ ಪುಸ್ತಕಗಳಲ್ಲಿ ತಲಾ 900 ಚೌಪದಿಗಳಿವೆ. '...ನಲಿವು' ಸಂಕಲನದಲ್ಲಿ ಸಂತೋಷದ ಗುಟ್ಟು ಹೇಳುವ ಚೌಪದಿಗಳಿದ್ದರೆ, '... ಬದುಕು ಬೆಳಕು ' ಸಂಕಲನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚೌಪದಿಗಳಿವೆ. ಒಂದಕ್ಕಿಂತ ಒಂದು ಆಕರ್ಷಕವಾಗಿವೆ ಎನ್ನುವುದು ವಿಶೇಷ.

ಶೀರ್ಷಿಕೆ: ಮುದ್ದುರಾಮನ ನಲಿವು; ಮುದ್ದುರಾಮನ ಬದುಕು-ಬೆಳಕು
ಲೇ: ಕೆ.ಸಿ. ಶಿವಪ

ಬೆಲೆ: ರೂ. 200 × 10 = ₹2000
ರಿಯಾಯಿತಿ: ರೂ. ₹1800
ರವಾನೆ ವೆಚ್ಚ: ₹೧೫೦
ಒಟ್ಟು ಮೊತ್ತ: ರೂ. ₹೧೯೫೦/-
(ಪ್ರತ್ಯೇಕವಾಗಿ ತರಿಸಿಕೊಂಡರೆ ಅಂಚೆ ವೆಚ್ಚ ಪ್ರತ್ಯೇಕ)

(ಆಸಕ್ತರು ತಮ್ಮ ವಿಳಾಸವನ್ನು '9886933342' ಗೆ ವಾಟ್ಸಾಪ್ ಮಾಡಲು ಕೋರುತ್ತೇವೆ. ರಿಜಿಸ್ಟರ್ಡ್ ಅಂಚೆ ಮೂಲಕ ಕಳಿಸಲಾಗುವುದು)

07/10/2023
ಪ್ರಸ್ತುತ ಈಗ ಬಹುಮುಖ ಪ್ರಜ್ಞೆ ಡಾ. ತಾತಾಸಾಹೇಬ ಬಾಂಗಿ ಅವರ ಕುರಿತು ಜೀವನಯಾನದ ಸಮಗ್ರ ಪರಿಚಯವನ್ನು ಸಂಕ್ಷಿಪ್ತ ಹಾಗೂ ತುಂಬಾ ಆಪ್ತವಾಗಿ ನಿರೂಪಿ...
08/11/2022

ಪ್ರಸ್ತುತ ಈಗ ಬಹುಮುಖ ಪ್ರಜ್ಞೆ ಡಾ. ತಾತಾಸಾಹೇಬ ಬಾಂಗಿ ಅವರ ಕುರಿತು ಜೀವನಯಾನದ ಸಮಗ್ರ ಪರಿಚಯವನ್ನು ಸಂಕ್ಷಿಪ್ತ ಹಾಗೂ ತುಂಬಾ ಆಪ್ತವಾಗಿ ನಿರೂಪಿಸಿದ್ದು ಓದುಗರಲ್ಲಿ ಕುತೂಹಲ ಹಾಗೂ ಆಸಕ್ತಿ ಮೂಡಿಸುವಂತಿದೆ. ತಾತಾ ಅವರು ನಮ್ಮ ನಡುವಿನ ಒಬ್ಬ ಅಸಾಧಾರಣ ವ್ಯಕ್ತಿಗಳಾಗಿ ಗಮನ ಸೆಳೆಯುತ್ತಾರೆ. ಬಹುಮುಖ ಹೋರಾಟಗಾರರಾಗಿ, ಸಂಶೋಧಕರಾಗಿ, ಹಿರಿಯ ನ್ಯಾಯವಾದಿಗಳಾಗಿ ಅವರ ಸೇವೆ ಅನನ್ಯವಾದುದು, ಇದರೊಂದಿಗೆ ಸಮಾಜದ ಸ್ವಾಸ್ಥ್ಯ ಬಯಸಿದ ಅವರು “ಜಮಖಂಡಿ ಜಿಲ್ಲೆಯಾಗಬೇಕು" ಎಂಬ ಹಿಂದಾಸೆಯುಳ್ಳವರು. ಅದು ಫಲಿಸಲಿ ಎ೦ದು ಆಶಿಸುತ್ತೇವೆ, ಅಂಥವರ ಜೀವನಯಾನದ ಹೆಜ್ಜೆಗುರುತುಗಳನ್ನು ಈ ಕೃತಿಯ ಮೂಲಕ ಬೆಳಕು ಚೆಲ್ಲುವ ಗುರುನಾಥ ಅವರ ಪ್ರಯತ್ನ ಶ್ಲಾಘನೀಯ...

ಬೆಲೆ 125/-

ಭೂತ, ವರ್ತಮಾನ, ಭವಿಷ್ಯತ್ತನ್ನು ಗ್ರಹಿಸಿಕೊಳ್ಳುವ ಬೌದ್ಧಿಕತೆಯನ್ನು ಚರಿತ್ರೆಯ ಮೂಲಕ ಪಡೆದುಕೊಳ್ಳುದಲ್ಲಿ ಇಂದಿನ ಯುವ ಪೀಳಿಗೆ ಸೋತಿದೆ. ಅದಕ್ಕೆ ಕಾರಣ ಶೈಕ್ಷಣಿಕ ಕ್ಷೇತ್ರವನ್ನು ಪಕ್ಷರಾಜಕಾರಣದ ಬೀಜಗಳನ್ನು ಬಿತ್ತಲು ಫಲವತ್ತಾದ ಭೂಮಿಯೆಂದು ಭಾವಿಸಲಾಗಿದೆ. ಕಾರಣ ನಿಜವಾದ ಚರಿತ್ರೆಯ ವಿಕಾಸಗಳು ಯುವಕರ ಬದುಕಿನ ಆದರ್ಶವಾಗುತ್ತಿಲ್ಲ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಹಿರಿಯರಾದ ತಾತಾ" ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ತಾತಾಸಾಹೇಬ ಬಾಂಗಿಯವರು ಹುತಾತ್ಮ ವೀರಪಾಂಡ್ಯ ಕಟ್ಟಬೊಮ್ಮುವಿನ ಕುರಿತು ಬರೆಯುವುದರ ಮುಖೇನ ಚರಿತ್ರೆಯ ಪ್ರಮಾದವನ್ನು ಸರಿಪಡಿಸುವ ಮಹತ್ವದ ಕಾರ್ಯಮಾಡಿರುವುದಕ್ಕೆ ಅವರನ್ನು ಅಭಿನಂದಿಸುವೆ..

ಕಟ್ಟಬೊಮ್ಮುವಿನ ಕುರಿತು ನನಗೆ ತಿಳಿದಂತೆ ಗಂಭೀರವಾದ ಅಧ್ಯಯನಗಳು ನಡೆದಿಲ್ಲ. ಈ ಕೃತಿಯೊಂದು ಚರಿತ್ರೆಯ ಶೋಧಕರಿಗೆ ಕೈದೀವಿಗೆ ಕ್ಷೇತ್ರಕಾರ್ಯ ಆನೇಕ ದಾಖಲೆಗಳ ಮೂಲಕ ಕಟ್ಟಿಬೊಮ್ಮುನ ಕುರಿತಂತೆ ಮಹತ್ವದ ವಿಷಯಗಳನ್ನು ಸಂಗ್ರಹಿಸಿ ಬರೆದ ಅಧ್ಯಯನಶೀಲ ಕೃತಿಯಿದು 'ತಾತಾ" ಅವರ ಬರದಕ್ಕೊಂದು ಚಿತ್ರಕಶಕ್ತಿಯಿದೆ. ಹೀಗಾಗಿ ಈ ಕೃತಿ ಓದುವ ಹೊತ್ತಿನಲ್ಲಿ ನನ್ನ ಕಣ್ಣೆದುರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಬಂದು ಹೋದರು. ಸರಳ ಭಾಷೆಯ ನಿರೂಪಣಾ ವಿಧಾನದಿಂದ ಕೃತಿ ಓದುಗನನ್ನು ತೀವ್ರವಾಗಿ ಆವರಿಸಿಕೊಳ್ಳುತ್ತದೆ.

ದೇಶ, ದೇಶಾಭಿಮಾನ, ನೆಲಜಲದ ಬಗ್ಗೆ ಅಪವ್ಯಾಖ್ಯಾನಗಳು ಜನರ ದಿಕ್ಕು ತಪ್ಪಿಸುತ್ತಿರುವ ಹೊತ್ತಿನಲ್ಲಿ ಇಂತಹ ಕೃತಿಗಳ ಓದು ನಮ್ಮ ಯುವಕರಿಗೆ ಅಗತ್ಯವಾಗಿ ಬೇಕು, ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೆ ಇಂತಹ ಕೃತಿಗಳನ್ನು ಪಠ್ಯವಾಗಿಸುವುದರ ಮೂಲಕ ಮಕ್ಕಳ ಮನಸ್ಸಿನಲ್ಲಿ ಆದರ್ಶಗಳನ್ನು ತುಂಬಬೇಕು. ಅಂತಹ ವಿವೇಕ ಬರಬೇಕು ಪ್ರಭುತ್ವಕ್ಕೆ ಎಂಬುದು ನಮ್ಮಂತಹವರ ಹಂಬಲ ಮತ್ತೊಮ್ಮೆ ಇಂತಹ ಕೃತಿಯನ್ನು ರಚಿಸಿದ "ತಾತಾ ಅವರಿಗೆ ಗೌರವ ಪೂರ್ವಕವಾಗಿ ವಂದಿಸುವೆ..

ಡಾ. ಎಂ ಎಸ್ ಘಂಟಿ

ಬೆಲೆ 125/-

ಪ್ರತಿಗಳು ಲಭ್ಯ..
ಶ್ರೀ ಸಿದ್ದೇಶ್ವರ ಬುಕ್ ಹೌಸ್
ನಗರಸಭೆ ಎದುರುಗಡೆ ಜಮಖಂಡಿ
9886933342

ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...ಹೌದಲ್ಲವಾ? ಒಂದು ಯಶಸ್ಸಿಗಾಗಿ, ಗೆಲುವಿಗಾಗಿ, ಸಂಭ್ರಮಕ್ಕಾಗಿ, ಸಂತಸದ ಕ್ಷಣಕ್ಕಾಗಿ ಹಗಲಿರುಳು ದುಡಿದ...
19/10/2022

ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...

ಹೌದಲ್ಲವಾ? ಒಂದು ಯಶಸ್ಸಿಗಾಗಿ, ಗೆಲುವಿಗಾಗಿ, ಸಂಭ್ರಮಕ್ಕಾಗಿ, ಸಂತಸದ ಕ್ಷಣಕ್ಕಾಗಿ ಹಗಲಿರುಳು ದುಡಿದಿರುತ್ತೇವೆ. ದಣಿದಿರುexತ್ತೇವೆ. ನಾವು ಅಂದುಕೊಂಡಂತೆಯೇ ಆಗಿಬಿಟ್ಟರೆ, ಆನಂತರದಲ್ಲಿ ಹೇಗೆಲ್ಲ ಬದುಕಬಹುದು ಎಂದು ಕನಸು ಕಂಡಿರುತ್ತೇವೆ. ಗೆಲುವೆಂಬ ಆ ಗಂಧದ ಹಾರ ನಮ್ಮ ಕೊರಳಿಗೆ ಬೀಳಲಿ ಎಂದು ಬಯಸುತ್ತೇನೆ. ಅದಕ್ಕಾಗಿ ಪ್ರಾರ್ಥಿಸಿರುತ್ತೇವೆ. ಪೂಜೆ ಮಾಡಿಸುತ್ತೇವೆ. ಹರಕೆ ಕಟ್ಟಿರುತ್ತೇವೆ. ಹಾರೈಕೆಗೆ ತಲೆಯೊಡ್ಡಿರುತ್ತೇವೆ. ನಮ್ಮ ಪ್ರಯತ್ನ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಪಣಕ್ಕಿಟ್ಟು ಕಾದಿರುತ್ತೇವೆ. ಅಂಥ ಸಂದರ್ಭದಲ್ಲಿ, ಗೆಲುವು ಕೈ ಜಾರಿ, ಸೋಲೆಂಬುದು ಹೆಗಲೇರಿ ಕೂತುಬಿಡುತ್ತದೆ.

ಮನಸ್ಸು ಕದಡಿ ಹೋಗುವುದು, ಆತ್ಮವಿಶ್ವಾಸದ ಬಲೂನು ಒಡೆದುಹೋಗುವುದೇ ಆಗ. ನಮಗೆ ದೈವಬಲವಿಲ್ಲ. ಅದೃಷ್ಟವೂ ಇಲ್ಲ. ಬಯಸಿದ್ದು ಸಿಗುವುದಿಲ್ಲ. ಸೋಲುಗಳಿಂದ ಮುಕ್ತಿಯಿಲ್ಲ. ಎಸ್, ನಮ್ಮ ಪಾಲಿಗೆ ಒಳ್ಳೆಯ ದಿನಗಳೇ ಇಲ್ಲ. ಪರಿಶ್ರಮ, ತಪನೆ, ಶ್ರದ್ಧೆ- ಯಾವುದಕ್ಕೂ ಅರ್ಥವಿಲ್ಲ ಅನ್ನಿಸಿಬಿಡುತ್ತದೆ. ಸಂಕಟ- ಹತಾಶೆ ಜೊತೆಯಾಗುತ್ತದೆ. ಅಂಥ ಸಂದರ್ಭದಲ್ಲಿ ದುಡುಕಬಾರದು, ಹೆದರಬಾರದು, ತಾಳ್ಮೆ ಕಳೆದುಕೊಳ್ಳಬಾರದು. ತಾಳು ಮನವೇ ತಾಳು ಎಂದು ತನುವ ಸಂತೈಸಿಕೊಂಡು ಹೆಜ್ಜೆ ಮುಂದಿಡಬೇಕು. ನೆನಪಿರಲಿ: ಬೆಟ್ಟ ಹತ್ತುವಾಗ ಆಯಾಸವಾಗುತ್ತದೆ. ಕಾಲು ನೋಯುತ್ತದೆ. ನೆತ್ತಿ ಸುಡುತ್ತದೆ. ಹೇಗೋ ಸಾವರಿಸಿಕೊಂಡು 620 ನೇ ಮೆಟ್ಟಿಲು ದಾಟಿದ ನಂತರವಷ್ಟೇ- ಶ್ರವಣಬೆಳಗೊಳದಲ್ಲಿ, ಬಾಹುಬಲಿಯ ದರ್ಶನವಾಗುತ್ತದೆ! ಒಂದೊಂದು ಮೆಟ್ಟಿಲು ಹತ್ತಿದಾಗಲೂ ಸೋಲನ್ನು ಸೋಲಿಸಿದ್ದೇವೆ ಅಂದುಕೊಳ್ಳುವುದು ಜಾಣತನ.
****

ನಾವು ನತದೃಷ್ಟರು, ದುರಾದೃಷ್ಟವಂತರು ಎಂಬುದು ಹಲವರ ನೋವಿನ ನುಡಿ. ಆದರೆ, ನಮಗಿಂತ ಹೆಚ್ಚು ನೋವುಂಡವರು, ಅಸಹಾಯಕ ರು ನಮ್ಮ ಸುತ್ತಲೂ ಇರುತ್ತಾರೆ, ಮತ್ತು ಅಂಥವರ ಪೈಕಿ ಕೆಲವರು ಅನನ್ಯ ಸಾಧನೆಯ ಮೂಲಕ, ಕರುಣಾರ್ದ್ರ ಸೇವೆಯ ಮೂಲಕ, ನಿಷ್ಕಲ್ಮಶ ಪ್ರೀತಿಯ ಮೂಲಕ ಜಗವ ಗೆದ್ದಿರುತ್ತಾರೆ. ಅಂಥವರನ್ನು ಕಂಡಾಗ ಮತ್ತೆ ನೆನಪಾಗುವುದು ಅದೇ ಹಾಡು: ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...

ಅಂದಹಾಗೆ, ಇದು ನನ್ನ ಹತ್ತನೇ ಪುಸ್ತಕ. ಪ್ರತಿಯೊಂದು ಪುಟವನ್ನೂ ತುಂಬ ಶ್ರದ್ಧೆಯಿಂದ ರೂಪಿಸಿದ್ದೇವೆ. ಇಲ್ಲಿನ ಬರಹಗಳು ಕೃಷ್ಣನ ಕೊಳಲ ನಾದದಂತೆ ಎಲ್ಲರನ್ನೂ ಕಾಡಲಿ. ಮುದ್ದುಕಂದನ ನಗೆಯಂತೆ ಎಲ್ಲರ ಮನ ಗೆಲ್ಲಲಿ, ಎಂದು ಪ್ರಾರ್ಥನೆ.
****
ಕೋಗಿಲೆ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದಿಲ್ಲ. ಕಾಗೆ ಇಲ್ಲದ ಸಂದರ್ಭ
ನೋಡಿಕೊಂಡು ಅದರ ಗೂಡಲ್ಲಿ ಮೊಟ್ಟೆಯಿಟ್ಟು ಬಂದುಬಿಡುತ್ತದೆ. ಈ ಕಪಟ ಗೊತ್ತಿಲ್ಲದ
ಕಾಗೆ, ಕೋಗಿಲೆಯ ಮೊಟ್ಟೆಗೂ ಕಾವು ಕೊಟ್ಟು ಮರಿ ಮಾಡಿ ಅದನ್ನು ಸಾಕುತ್ತದೆ. ಮುಂದೆ
ಸತ್ಯ ಗೊತ್ತಾದಾಗ, ಕೋಗಿಲೆಯ ಮರಿಯನ್ನು ಗೂಡಿಂದ ಆಚೆ ತಳ್ಳುತ್ತದೆ. ಇದು ನಮಗೆಲ್ಲಾ
ಗೊತ್ತಿರುವ ಪ್ರಕೃತಿ ರಹಸ್ಯ, ಕಣ್ಣೆದುರಿನ ವಾಸ್ತವ.

ಹೀಗೆ ದಿಢೀರನೆ ಬೀದಿಗೆ ಬೀಳುತ್ತದಲ್ಲ; ಅದು ಕೋಗಿಲೆಯ ಬದುಕಿನ ಮೊದಲ ಸೋಲು. ನಂತರದ
ಅದೆಷ್ಟೋ ದಿನಗಳನ್ನು ತಬ್ಬಲಿತನ, ಅಸಹಾಯಕತೆ, ಅನಾಥಭಾವ, ಕಷ್ಟ, ಕಣ್ಣೀರು, ನೋವು,
ನಿಟ್ಟುಸಿರಿನ ಜೊತೆಗೇ ಕಳೆಯುವ ಕೋಗಿಲೆಯ ಬದುಕಲ್ಲಿ ಕಡೆಗೂ ' ಬಂಗಾರದ ಕ್ಷಣವೊಂದು'
ಬಂದುಬಿಡುತ್ತದೆ. ಮಾಮರದಲ್ಲಿ ಚಿಗುರು ಕಾಣಿಸಿದ ಕ್ಷಣದಿಂದಲೇ ಕೋಗಿಲೆಯ ಕೊರಳು
ಸಂಗೀತದ ಆಲಯವಾಗುತ್ತದೆ. ಕುಹೂ...ಕುಹೂ ದನಿಯಲ್ಲಿ ಸಪ್ತಸ್ವರ ಕೇಳಿಸುತ್ತದೆ. ಆ
ಸುಮದುರ ದನಿಗೆ ಜಗತ್ತು ತಲೆದೂಗುತ್ತದೆ. ಕುಣಿದು, ನಲಿದು, ಮಣಿದು ಕೃತಜ್ಞತೆ
ಸಲ್ಲಿಸುತ್ತದೆ. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ದೊರೆಯುವ ಗೆಲುವು
ಎಂಬ ಅಮೃತ ಸಿಂಚನಕ್ಕೆ ಸಿಗುವ ಗೌರವ ಇದು.

ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಂಥದೊಂದು ಅಮೃತ ಘಳಿಗೆಗೆ ಹಂಬಲಿಸಿದ, ಸೋಲುಗಳ
ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ,
ಅಂತಃಕರಣವನ್ನೇ ಉಸಿರಾಗಿಸಿಕೊಂಡ ಹೃದಯವಂತರ ಕಥೆಗಳು ಈ ಪುಸ್ತಕದ ಪುಟಗಳನ್ನೂ
ತುಂಬಿಕೊಂಡಿವೆ. ಆ ಕೋಗಿಲೆಗಳ ಬದುಕಿನ ಹಾಡು ನಮ್ಮೊಳಗೂ ಉಳಿಯಲಿ.

ಎ. ಆರ್. ಮಣಿಕಾಂತ್
ಬೆಂಗಳೂರು

ಪದವಿ-ಸ್ನಾತಕೋತ್ತರ ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಜ್ಞಾನವಿಕಾಸಕ್ಕಾಗಿ ಸಿದ್ಧಪಡಿಸಲಾದ ಪುಸ್ತಕ  #ಹಳಗನ್ನಡ_ಸಾಹಿತ್ಯ_ಚಂದ್ರಿಕೆ ಕನ್ನಡ ನಾ...
18/12/2021

ಪದವಿ-ಸ್ನಾತಕೋತ್ತರ ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ
ಜ್ಞಾನವಿಕಾಸಕ್ಕಾಗಿ ಸಿದ್ಧಪಡಿಸಲಾದ ಪುಸ್ತಕ
#ಹಳಗನ್ನಡ_ಸಾಹಿತ್ಯ_ಚಂದ್ರಿಕೆ

ಕನ್ನಡ ನಾಡು-ನುಡಿ-ಸಾಹಿತ್ಯ ಮತ್ತು ಸಂಸ್ಕೃತಿಯ ಸಾರವನ್ನು ತನ್ನ ಗರ್ಭದಲ್ಲಿರಿಸಿಕೊಂಡು ಕಾಲಾಂತರದಲ್ಲಿ ಬಿತ್ತರಿಸಿದ ಹಳಗನ್ನಡ ಸಾಹಿತ್ಯವು ಇಂದು ಓದುಗರಿಗೆ ಕಬ್ಬಿಣದ ಕಡಲೆಯಾದರೂ ರಸಾದ ಸಹೃದಯರಿಗೆ ಮಧುವಿದ್ದಂತೆ. ಅದರ ಆಸ್ವಾದನೆಯಲ್ಲಿಯೇ ಒಂದು ರೋಮಾಂಚನಕಾರಿಯಾದ ಸವಿಯಾದ ಆಹ್ಲಾದವಿದೆ. ಆ ಆಹ್ಲಾದವನ್ನೇ ಸಾಹಿತ್ಯ ಅಭ್ಯಾಸಿಗಳಿಗೆ 'ಹಳಗನ್ನಡ ಸಾಹಿತ್ಯ ಚಂದ್ರಿಕೆ'ಯ ಮೂಲಕ ಉಣಬಡಿಸಲು ಹೊರಟ #ಪ್ರೊ_ಯಶವಂತ_ಕೊಕ್ಕನವರ ಅವರ ಕಾರ್ಯ ಸ್ತುತ್ಯಾರ್ಹ

ಕೃತಿಯು ಹಲ್ಮಿಡಿ ಶಾಸನದಿಂದ ಪಯಣಿಸಿ ವಡ್ಡಾರಾಧನೆ, ಪಂಚತಂತ್ರಗಳನ್ನು ದಾಟಿ ರನ್ನನ ಗದಾಯುದ್ಧ, ನಾಗಚಂದ್ರ ಕವಿಯ ಸೀತಾಪಹರಣ, ನಯಸೇನನ ಧರ್ಮಾಮೃತದ ದಯಾಮಿತ್ರಶೆಟ್ಟಿಯ ಕತೆಯಾದಿಯಾಗಿ ಹಿಡಿದು ಆಂಡಯ್ಯನವರೆಗಿನ ಪ್ರಮುಖ ಸಾಹಿತ್ಯ ಘಟ್ಟಗಳನ್ನು ಪರಾಮರ್ಶಿಸುತ್ತ ಪ್ರೀತಿಯ ಓದುಗರಾದ ನಮಗೆ ಮಹಾಕವಿ ರನ್ನನ ಸಿಂಹಾವಲೋಕನದ ಶೈಲಿಯನ್ನು ನೆನಪಿಗೆ ತಾರದೇ ಇರದು....

ಬೆಲೆ ₹೧೬೦/-
ಪುಟಗಳು ೨೪೮

ಪ್ರತಿಗಳಿಗೆ ಸಂಪರ್ಕಿಸಿ :
#ಶ್ರೀ_ಸಿದ್ದೇಶ್ವರ_ಬುಕ್_ಹೌಸ್
#ನಗರಸಭೆ_ಎದುರುಗಡೆ
#ಜಮಖಂಡಿ_9886933342

ಗಾಂಧಿ ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು 1914-1948’ ಸಂಪುಟ-1 ಮತ್ತು ಸಂಪುಟ 2 ' ಲೇಖಕ ಎಂ.ಸಿ ಪ್ರಕಾಶ್ ಅವರ ಅನುವಾದಿತ ಕೃತಿ. ಗಾಂಧಿ, ಇಪ...
23/11/2021

ಗಾಂಧಿ ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು 1914-1948’ ಸಂಪುಟ-1 ಮತ್ತು ಸಂಪುಟ 2 ' ಲೇಖಕ ಎಂ.ಸಿ ಪ್ರಕಾಶ್ ಅವರ ಅನುವಾದಿತ ಕೃತಿ. ಗಾಂಧಿ, ಇಪ್ಪತ್ತನೆಯ ಶತಮಾನದ ಮಹಾನ್ ಚೇತನಗಳಲ್ಲೊಬ್ಬರು; ಆ ಶತಮಾನದ ಶ್ರೇಷ್ಠ ಬದುಕನ್ನು ಬದುಕಿದವರು. ವಿಶ್ವದಾದ್ಯಂತ ಲಕ್ಷಾಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ಗಾಂಧಿ ಸ್ಫೂರ್ತಿಯಾಗಿದ್ದಾರೆ ಅವರ ಸಿಟ್ಟಿಗೆ ಕಾರಣವಾಗಿದ್ದಾರೆ; ಅವರಿಗೆ ಸಂತೋಷ ನೀಡಿದ್ದಾರೆ; ಅವರಿಗೆ ಸವಾಲಾಗಿದ್ದಾರೆ. ಬಹುತೇಕರು ಬ್ರಿಟಿಷ್ ಸಾಮ್ರಾಜ್ಯದ ನೆರಳನಲ್ಲಿಯೇ ಬದುಕಿದವರು; ಅವರ ಬಾಳಿನ ಹೆಚ್ಚಿನ ಅವಧಿಯಲ್ಲಿ ಅದು ಶಾಶ್ವತ ವಾಸ್ತವದಂತೆ ಕಾಣುತ್ತಿತ್ತು; ಆದರೆ ಅದನ್ನು ಕೆಳಗುರುಳಿಸಲು ಇನ್ನೆಲ್ಲರಿಗಿಂತ ಹೆಚ್ಚಿನ ಪ್ರಯತ್ನ ಮಾಡಿದವರು ಗಾಂಧಿ. ಹಿಂಸೆ, ಯುದ್ಧ, ಫ್ಯಾಸಿಸ್ಟ್ ಮತ್ತು ಕಮ್ಯುನಿಸ್ಟ್ ಸರ್ವಾಧಿಕಾರದಿಂದ ಕೂಡಿದ ಜಗತ್ತಿನಲ್ಲಿ ಗಾಂಧಿಯ ಬಳಿ ಇದ್ದ ಆಯುಧವೆಂದರೆ ತನ್ನ ತತ್ತ್ವ ಮತ್ತು ತನ್ನ ನಿದೇರ್ಶನ ಮಾತ್ರ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಅವರು ಜಾತಿ ಮತ್ತು ಅಂಗದ ತಾರತಮ್ಯವನ್ನು ವಿರೋಧಿಸಿದರು. ಅಂತರಧರ್ಮೀಯ ಸಾಮರಸ್ಯಕ್ಕಾಗಿ ಹೋರಾಡಿದರು. ಮತ್ತು, ಅದಕ್ಕಾಗಿ ಪ್ರಾಣತೆತ್ತರು. ಈ ಅದ್ಭುತವಾದ ಪುಸ್ತಕವು ಗಾಂಧಿ ದಕ್ಷಿಣ ಆಫ್ರಿಕಾವನ್ನು ಬಿಟ್ಟುಬಂದ ಕಾಲದಿಂದ 1948ರಲ್ಲಿ ಆದ ಅವರ ನಾಟಕೀಯ ಹತ್ಯೆಯವರೆಗಿನ ಕಥೆಯನ್ನು ಹೇಳುತ್ತದೆ. ಅಂಬೇಡ್ಕರ್, ಜಿನ್ನಾ, ವರ್ಚುಲ್ ಮತ್ತು ಇತರರೊಂದಿಗೆ ಗಾಂಧಿಯವರ ಚರ್ಚೆಗಳ ಹೊಸ ಓದೇ ಅಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೊಸ ಒಳನೋಟಗಳನ್ನು ಹಾಗೂ ಅದರ ಹಲವು ಎಲ್ಲೆಗಳನ್ನು ತೆರೆದಿಡುವ ಈ ಗ್ರಂಥಕ್ಕೆ ಟಾಲ್ಸ್ಟಾಯ್‌ನ ಬೀಸು ಇದೆ. ಅಲ್ಲದೆ, ಗಾಂಧಿಯವರ ಸಮಕಾಲೀನರು ಅವರನ್ನು ಅರ್ಥಮಾಡಿಕೊಂಡ ರೀತಿಯನ್ನೂ ಅದು ತೋರಿಸಿಕೊಡುತ್ತದೆ. ಇದುವರೆಗೂ ಪರಿಶೀಲಿಸದ ಆಕರಗಳನ್ನು ಆಧರಿಸಿದ ಈ ಗ್ರಂಥ, ಲೇಖಕರ ನಾಟಕೀಯ ಹಾಗೂ ರಾಜಕೀಯ ಪ್ರಜ್ಞೆಯಿಂದ ಜೀವಂತವಾಗಿದೆ. ದೇಶಪಿತನ ಕುರಿತು ಬಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಗ್ರಂಥವಾಗಿದೆ...

ವಸಂತ ಪ್ರಕಾಶನದಿಂದ ರಾಮಚಂದ್ರ ಗುಹ ಅವರ ಕನ್ನಡ ಅನುವಾದಿತ ಕೃತಿ 'ಗಾಂಧಿ: ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು (1914-1948) - 2 ಸಂಪುಟಗಳಲ್ಲಿ ನಮ್ಮ ಮಳಿಗೆಯಲ್ಲಿ ಲಭ್ಯ..

ಪ್ರತಿಗಳಿಗಾಗಿ ಸಂಪರ್ಕಿಸಿ:
ಮೊ: 9886933342

ಗಾಂಧಿ: ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು (1914-1948) - 2 ಸಂಪುಟಗಳು
ಮೂಲ: ರಾಮಚಂದ್ರ ಗುಹ
ಕನ್ನಡಕ್ಕೆ: ಎಂ.ಸಿ. ಪ್ರಕಾಶ್‍

ಬೆಲೆ: ಸಂಪುಟ 1 - ರೂ. 530
ಸಂಪುಟ 2 - ರೂ. 590

ಲೇಖಕ ಮಲ್ಲಿಕಾರ್ಜುನ ಢಂಗಿ ಅವರ ಕಥಾ ಸಂಕಲನ-ನಾನು ಮತ್ತು ನನ್ನ ಹೆಣ. ’ಹೆಸರಿಲ್ಲದ ಹೂವುಗಳು’ ಎನ್ನುವ ಕವನ ಸಂಕಲನ ಹೊರ ತಂದಿರುವ ಲೇಖಕರು, ಈ ಕಥಾ...
23/10/2021

ಲೇಖಕ ಮಲ್ಲಿಕಾರ್ಜುನ ಢಂಗಿ ಅವರ ಕಥಾ ಸಂಕಲನ-ನಾನು ಮತ್ತು ನನ್ನ ಹೆಣ. ’ಹೆಸರಿಲ್ಲದ ಹೂವುಗಳು’ ಎನ್ನುವ ಕವನ ಸಂಕಲನ ಹೊರ ತಂದಿರುವ ಲೇಖಕರು, ಈ ಕಥಾ ಸಂಕಲನದಲ್ಲಿ ನಾಲ್ಕು ನೀಳ್ಗತೆಗಳಿವೆ. ಬದುಕಿನ ವಿವಿಧ ಆಯಾಮಗಳನ್ನು ವಿಷಯ ವಸ್ತುವಾಗಿಸಿಕೊಂಡಿರುವ ಕಥೆಗಳು, ಬದುಕಿನ ಸಲಹೆಗಳಾಗಿ, ಸೂಚನೆಗಳಾಗಿ, ಉಪದೇಶಗಳಾಗಿ, ಸಂದೇಶಗಳಾಗಿ ಓದುಗರ ಮನ ತಟ್ಟುತ್ತವೆ.

ಪ್ರತಿಗಳು ಲಭ್ಯ..
ಶ್ರೀ ಸಿದ್ದೇಶ್ವರ ಬುಕ್ ಹೌಸ್
ನಗರಸಭೆ ಎದುರುಗಡೆ
ಜಮಖಂಡಿ 587301
9886933342

*ಅಭಿನವ ಪ್ರಕಟಿಸಿರುವ ಸಾಹಿತ್ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಓದಬಹುದಾದ ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಿಗ...
19/10/2021

*ಅಭಿನವ ಪ್ರಕಟಿಸಿರುವ ಸಾಹಿತ್ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಓದಬಹುದಾದ ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನಿಗದಿಪಡಿಸಿದ ಪಠ್ಯಪುಸ್ತಕಗಳು’…*

1 ಅಸ್ತಿತ್ವವಾದ - ಕೆ.ವಿ. ತಿರುಮಲೇಶ್ - 175.00
2. ದೇಶೀವಾದ - ರಾಜೇಂದ್ರ ಚೆನ್ನಿ- 100.00
3. ವಾಸ್ತವತಾವಾದ - ಟಿ.ಪಿ. ಅಶೋಕ - 100.00
4. ನವ್ಯತೆ - ನರಹಳ್ಳಿ ಬಾಲಸುಬ್ರಹ್ಮಣ್ಯ - 75.00
5. ಬಂಡಾಯ-ದಲಿತ ಚಳುವಳಿ ಮತ್ತು ಸಾಹಿತ್ಯ - ಪುರುಷೋತ್ತಮ ಬಿಳಿಮಲೆ - 175.00
6. ಬಿನ್ನಪ - ಓ.ಎಲ್. ನಾಗಭೂಷಣಸ್ವಾಮಿ -100.00
7. ಶೈಲಿಶಾಸ್ತ್ರ - ಕೆ.ವಿ. ನಾರಾಯಣ - 75.00
8. ಸಾಂಸ್ಕೃತಿಕ ಅಧ್ಯಯನ - ರಹಮತ್ ತರೀಕೆರೆ - 200.00
9. ಹೊಸಗನ್ನಡ ಕವಿತೆ (ಆಡಳಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿದ ಅಧಿಕೃತ ಪಠ್ಯ) - ಜಿ.ಎಚ್. ನಾಯಕ - 500.00
10. ಸೈಕಲಾಜಿಕಲ್ ಕಾಂಪ್ಲೆಕ್ಸ್ ಗಳು - 175.00
11. ಸಾವಿನ ದಶಾವತಾರ - ಕೆ ಸತ್ಯನಾರಾಯಣ -150.00
12. ಋಗ್ವೇದ ಸ್ಪೂರಣ - ಏಚ. ಎಸ್ ವೆಂಕಟೇಶ್ಶಮೂರ್ತಿ 200.00
13. ಸ್ಮರಣೆ ಸಾಲದೆ - ನಾಗ ಐತಾಳ್ 150.00
14. ನವ ನಾಗರಿಕ ನಾಡುಗಳಲ್ಲಿ ನಾವು ಮಲ್ಲೇಶಯ್ಯ ಕೆ.ಬೀ. 220.00
15. ಸಾಹಿತ್ಯ ಅಧ್ಯಯನದ ನೆಲೆಗಳು ಸಂ: ಪಿ.ಚಂದ್ರಿಕಾ 300.00

*ಪುಸ್ತಕಗಳನ್ನು ಖರೀದಿಸಲು: 9886933342* (ವಿಳಾಸ ವಾಟ್ಸಪ್ ಮಾಡಿ)

15/10/2021

ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಗೆ ಉಪಯುಕ್ತ ಪುಸ್ತಕ ಗಳು..

ಶ್ರೀ ಸಿದ್ದೇಶ್ವರ ಬುಕ್ ಹೌಸ್ ನಗರಸಭೆ ಎದುರುಗಡೆ ಜಮಖಂಡಿ 587301
9886933342

📙  ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ  📙  *********************************************ಹನ್ನೆರಡನೆಯ ಶತಮಾನದ ಶತಮಾನದ ಸಮಾನತೆಯ ತಾತ್ವ...
25/09/2021

📙 ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ 📙

*********************************************

ಹನ್ನೆರಡನೆಯ ಶತಮಾನದ ಶತಮಾನದ ಸಮಾನತೆಯ ತಾತ್ವಿಕ ಸಿದ್ಧಾಂತವನ್ನು ವಚನಗಳ ಮೂಲಕ ಜಾಗೃತಿಯನ್ನು ಮೂಡಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಶರಣರ ಕುರಿತು ಐತಿಹಾಸಿಕ ಅಧ್ಯಯನ ನಡೆದಿರುವುದು ವಿರಳ. ಇದಕ್ಕೆ ಸಾಹಿತ್ಯ ದಾಖಲೆಗಳಿದ್ದರೂ ಅದನ್ನು ಅಧಿಕೃತಗೊಳಿಸಲು ಪುರಾತತ್ವೀಯ ಆಕರಗಳ ಕೊರತೆ ಸಾಕಷ್ಟಿದೆ. ಶಿವಶರಣರ ಜೀವನ ಚರಿತ್ರೆಯ ಪರಿಪೂರ್ಣ ಮತ್ತು ಸ್ಪಷ್ಟೀಕರಣಕ್ಕಾಗಿ ಲಭ್ಯ ಪುರಾತತ್ವೀಯ ಆಕರಗಳನ್ನು ಕ್ರೂಢಿಕರಿಸುವ ಯೋಜನೆಯನ್ನು ರೂಪಿಸಬೇಕಾಗಿದೆ. ಅಂತಹದ್ದೊಂದು ಕಾರ್ಯವನ್ನು ವಚನಕಾರ ಸಿದ್ಧರಾಮನನ್ನು ಕೇಂದ್ರೀಕರಿಸಿ ' ಶಾಸನಗಳಲ್ಲಿ ಸೊನ್ನಲಿಗೆ ಸಿದ್ಧರಾಮ ' ಎಂಬ ಕೃತಿಯನ್ನು ಹೊರತಂದಿರುವ ಡಾ. ಮಂಜುನಾಥ ಎಸ್.ಪಾಟೀಲ ಅವರು ನಿಜಕ್ಕೂ ಅಭಿನಂದನಾರ್ಹರು.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೊನ್ನಲಿಗೆ ಸಿದ್ಧರಾಮನಿಗೆ ಸಂಬಂಧಿಸಿದಂತೆ ಸುಮಾರು 31 ಶಾಸನಗಳನ್ನು ಗುರುತಿಸಿದ್ದಾರೆ. ಈ ಶಾಸನಗಳಲ್ಲಿ ಕಂಡುಬರುವ ಸಿದ್ಧರಾಮನ ವಚನಗಳು, ಆತನ ಅಂಕಿತನಾಮ, ಕಪಿಲಸಿದ್ಧಮಲ್ಲಿಕಾರ್ಜುನ ದೇವರಿಗೆ ನೀಡಿದ ದಾನ ದತ್ತಿಗಳ ಕುರಿತಾದ ವಿಷಯಗಳನ್ನು ಚರ್ಚಿಸುವುದರ ಮೂಲಕ ಆ ಶಾಸನಗಳ ಸಾರಾಂಶ ಮತ್ತು ಪಠ್ಯವನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಸೊನ್ನಲಿಗೆ ಸಿದ್ಧರಾಮನ ಕುರಿತಾಗಿ ಸಂಶೋಧನೆ ಕೈಗೊಳ್ಳುವವರಿಗೆ ಇದು ಹೆಚ್ಚಿನ ಮಾಹಿತಿ ಒದಗಿಸಿಕೊಡುತ್ತದೆ. ಇಂತಹ ಸಂಶೋಧನೆಗಳು ಅಪೇಕ್ಷಣೀಯವಾಗಿರುವ ಸಂದರ್ಭದಲ್ಲಿ ಇದೊಂದು ಇತಿಹಾಸ ಸಂಶೋಧನ ಕ್ಷೇತ್ರಕ್ಕೆ ನೀಡಿದ ಉಪಯುಕ್ತ ಕೊಡುಗೆ ಎನಿಸಿದೆ.

( ಬೆನ್ನುಡಿಯಿಂದ )

ಡಾ.ವಾಸುದೇವ ಬಡಿಗೇರ
ಪ್ರಾಧ್ಯಾಪಕರು
ಕನ್ನಡ ವಿಶ್ವವಿದ್ಯಾಲಯ
ಹಂಪಿ.

🌹🙏🌼🙏🌷🙏💐🙏🏵️🙏🌺🙏🌸🙏🌹🙏🌹

ಅಂಚೆ ವೆಚ್ಚ ಸೇರಿ ಪುಸ್ತಕ ಬೆಲೆ : 200/-

ಪುಸ್ತಕಕ್ಕಾಗಿ ವಾಟ್ಸಾಪ್ ಮಾಡಿ : 9886933342

Address

Opp. Municipal Office, Main Road
Jamkhandi
587301

Opening Hours

Monday 9:30am - 2pm
4pm - 8:30pm
Tuesday 9:30am - 2pm
4pm - 8:30pm
Wednesday 9:30am - 2pm
4pm - 8:30pm
Thursday 9:30am - 2pm
4pm - 8:30pm
Friday 9:30am - 2pm
4pm - 8:30pm
Saturday 9:30am - 2pm
4pm - 8:30pm
Sunday 9:30am - 2pm
4pm - 8:30pm

Telephone

9886933342

Alerts

Be the first to know and let us send you an email when Shri Siddeshwar Book House posts news and promotions. Your email address will not be used for any other purpose, and you can unsubscribe at any time.

Share

Category