Prajodayaprakashana

Prajodayaprakashana ಸದಭಿರುಚಿಯ ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುವ ಮತ್ತು ತಲುಪಿಸುವ ಪುಸ್ತಕದಂಗಡಿ

'ಋತ'ದ 'ಭಾರತದ ಆದಿವಾಸಿ ಕಥನ: ಅಸ್ಮಿತೆ ಮತ್ತು ಅಸಮಾನತೆ' ಸಂಚಿಕೆ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊ...
20/08/2026

'ಋತ'ದ 'ಭಾರತದ ಆದಿವಾಸಿ ಕಥನ: ಅಸ್ಮಿತೆ ಮತ್ತು ಅಸಮಾನತೆ' ಸಂಚಿಕೆ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-5ebd2

ಡಾ.ಬಸೀರಾಬಾನು ನಿಡಗುಂದಿ ಅವರ 'ಆಯಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ' ಕೃತಿ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಟಿಪ್ಪಣಿ....
20/08/2026

ಡಾ.ಬಸೀರಾಬಾನು ನಿಡಗುಂದಿ ಅವರ 'ಆಯಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ' ಕೃತಿ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಟಿಪ್ಪಣಿ...

'ಆಯಗಾರರ ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/5539864/-9fe95

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಅಕ್ಷತಾ ಹುಂಚದಕಟ್ಟೆ ಅವರು ನಿರೂಪಿಸಿರುವ ಕಡಿದಾಳು ಶಾಮಣ್ಣನವರ ಆತ್ಮಕಥನ 'ಕಾಡ ತೊರೆಯ ಜಾಡು' ಪುಸ್ತಕದ 'ನೊಂದ ಜೀವಕ್ಕೆ ಸಂಗೀತದ ಸಾಂತ್ವನ' ಅಧ್ಯ...
20/08/2026

ಅಕ್ಷತಾ ಹುಂಚದಕಟ್ಟೆ ಅವರು ನಿರೂಪಿಸಿರುವ ಕಡಿದಾಳು ಶಾಮಣ್ಣನವರ ಆತ್ಮಕಥನ 'ಕಾಡ ತೊರೆಯ ಜಾಡು' ಪುಸ್ತಕದ 'ನೊಂದ ಜೀವಕ್ಕೆ ಸಂಗೀತದ ಸಾಂತ್ವನ' ಅಧ್ಯಾಯ ಓದಲು ಲಿಂಕ್ ಕ್ಲಿಕ್ಕಿಸಿ...
https://tv9kannada.com/literature-culture/acchigoo-modhalu-an-excerpt-of-kaada-thoreya-jaadu-kadidalu-shamanna-life-history-by-akshatha-hunchadakatte-skvd-255892.html

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಕಾಡ ತೊರೆಯ ಜಾಡು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/kaada-toreya-jaadu

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥನ 'ಕಾಗೆ ಮುಟ್ಟಿದ ನೀರು' ಕುರಿತು ರಾಜಾರಾಂ ತಲ್ಲೂರು ಅವರ ಟಿಪ್ಪಣಿ...ಹೂಜಿ ಮತ್ತು ಕಲ್ಲು…!.................
19/08/2026

ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥನ 'ಕಾಗೆ ಮುಟ್ಟಿದ ನೀರು' ಕುರಿತು ರಾಜಾರಾಂ ತಲ್ಲೂರು ಅವರ ಟಿಪ್ಪಣಿ...

ಹೂಜಿ ಮತ್ತು ಕಲ್ಲು…!...................

'ಕಾಗೆ' ಮತ್ತು 'ನೀರು' ಬಂದ ಮೇಲೆ ಕಥೆ ಪೂರ್ಣವಾಗಲು ಹೂಜಿ ಮತ್ತು ಕಲ್ಲು ಬರಬೇಕಲ್ಲವೆ?
ಬಿಳಿಮಲೆಯವರ 'ಕಾಗೆ ಮುಟ್ಟಿದ ನೀರು' ಅವರ ಮಾತಿನಷ್ಟೇ ಸರಾಗವಾಗಿ, ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ.

1986-87ರ ಹೊತ್ತಿಗೆ ಮಂಗಳೂರು ವಿವಿಯಲ್ಲಿ ಎಳೆಯ – ಉತ್ಸಾಹಿ ಉಪನ್ಯಾಸಕರಾಗಿದ್ದ ಬಿಳಿಮಲೆಯವರ ಮಾತನ್ನು ನಾನು ಮೊದಲು ಕೇಳಿದ್ದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಕನ್ನಡ ಸಂಘಕ್ಕೆ ಅವರು ಉಪನ್ಯಾಸಕ್ಕಾಗಿ ಬಂದಿದ್ದಾಗ. ಅವರಿಗೆ ಉಪನ್ಯಾಸದ ಬಳಿಕ ಪ್ರಶ್ನೆಗಳನ್ನು ಕೇಳಿ 'ಕಿರಿಕಿರಿ' ಮಾಡಿದ ತಂಡದ ಭಾಗವಾಗಿ ನಾನೂ ಇದ್ದೆ!

ಅದಾದ ಬಳಿಕ ನನ್ನ ದಿಕ್ಕು ಬದಲಾಯ್ತು. 1989ರ ಹೊತ್ತಿಗೆ ವಿವಿಯಲ್ಲಿ ಅವರ ವಿದ್ಯಾರ್ಥಿ ಆಗಿದ್ದ ಕೃಷ್ಣಮೂರ್ತಿ ಚಿತ್ರಾಪುರ (ಈಗ ಗೋವಿಂದ ಕಾಲೇಜಿನ ಪ್ರಾಂಶುಪಾಲರು) ಅವರ ಮೂಲಕ ಬಿಳಿಮಲೆ ಪರಿಚಿತರಾದರು. ಆಗ ನಾವು ಸುರತ್ಕಲ್ ಪರಿಸರದಲ್ಲಿ ಪಂಚಮುಖಿ ವೇದಿಕೆ ಹೆಸರಲ್ಲಿ ನಡೆಸುತ್ತಿದ್ದ ಸ್ಟಡಿ ಸರ್ಕಲ್ ಗೆ ಬಿಳಿಮಲೆಯವರು ಒಂದೆರಡು ಬಾರಿ ಬಂದಿದ್ದರು. ಆ ಕಾಲಕ್ಕೆ ಅವರೊಂದಿಗೆ ಸತತ ಸಂಪರ್ಕಗಳಿದ್ದವು.

ಮತ್ತೆ ಅವರು ನನ್ನ ಮಟ್ಟಿಗೆ ಸುದ್ದಿಗೆ ಬಂದದ್ದು, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ಅವರ ಕಿರಿಯ ಸಹೋದ್ಯೋಗಿ ಆಗಿದ್ದ ನನ್ನ ಸ್ನೇಹಿತ, ಉರ್ದು ಉಪನ್ಯಾಸಕ ಅಹ್ತೇಶಾಮ್ ಖಾನ್ ಅವರ ಮೂಲಕ. ಆ ಬಳಿಕ ಭೇಟಿಯಾದದ್ದು, ಮೂರು ವರ್ಷಗಳ ಹಿಂದೆ ಅವರು ಪ್ರಶಸ್ತಿ ಸ್ವೀಕಾರಕ್ಕೆಂದು ಉಡುಪಿಗೆ ಬಂದಿಳಿದುಕೊಂಡಿದ್ದಾಗ.

30 ವರ್ಷಗಳ ದೀರ್ಘಾವಧಿಯ ಬಳಿಕವೂ ಈ ಸರಾಗ-ಆಕರ್ಷಕ ಮಾತು ಅದೇ ಮೊನಚು ಹೊಂದಿತ್ತು. ಇಂದು 'ಕಾಗೆ ಮುಟ್ಟಿದ ನೀರು', ಆ ಭೇಟಿಯ ಮುಂದುವರಿಕೆಯೇನೋ ಎಂಬಷ್ಟು ಆಪ್ತವಾಗಿ ಓದಿಸಿಕೊಂಡು ಹೋಯಿತು. ಅದಕ್ಕೆ ಈ ಪುಸ್ತಕದಲ್ಲಿ ಬರುವ ಹಲವು ಪಾತ್ರಗಳು ನನಗೂ ದೈನಂದಿನ ಬದುಕಿನಲ್ಲಿ ಆಗಾಗ ಎದುರಾದ ಪಾತ್ರಗಳೇ ಎಂಬುದೂ ಕಾರಣ ಆಗಿರಬಹುದು.

ಈ ಕಥೆಯನ್ನೆಲ್ಲ ನಾನು ಯಾಕೆ ಹೇಳುತ್ತಿದ್ದೇನೆಂದರೆ, ಒಬ್ಬರು ಉಪನ್ಯಾಸಕರಾಗಿ ಅವರ ವೃತ್ತಿಯನ್ನು ಹೇಗೆ ನಿಭಾಯಿಸಿದರೆಂಬುದರ ವಿವರಣೆ ಈ ಆತ್ಮಚರಿತ್ರೆಯಲ್ಲಿ ನನಗೆ ಮಹತ್ವದ್ದು. ಕನ್ನಡದ ಹೆಚ್ಚಿನೆಲ್ಲ ಮಹತ್ವದ ಬರಹಗಾರರೂ ಉಪನ್ಯಾಸಕರೇ ಆದರೂ, ಅವರು ಬರಹಗಾರರಾಗಿ ನೆನಪುಳಿಯುತ್ತಾರೆಯೇ ಹೊರತು ಅವರ 'ವೃತ್ತಿಪರತೆ'ಯ ಕಾರಣಕ್ಕಲ್ಲ. (ಗಮನಿಸಿ: ಇದನ್ನು ನಾನು ನನ್ನ ಕಣ್ಣಳತೆಯ ವ್ಯಾಪ್ತಿಯೊಳಗೆ ಸೀಮಿತಗೊಳಿಸಿ ಹೇಳುತ್ತಿದ್ದೇನೆ.)

ಅವರು ಆತ್ಮಕಥೆಯ ಪೂರ್ವಾರ್ಧದಲ್ಲಿ ಹೆಸರಿಸುವ ಅವರ ಗುರು ಪ್ರೊ|ಅಮೃತ ಸೋಮೇಶ್ವರರು, ಅಥವಾ ಅಮೃತರ ಓರಗೆಯಲ್ಲಿ ಸುರತ್ಕಲ್ ನಲ್ಲಿದ್ದ ಡಾ|ಸೀ.ಹೊಸಬೆಟ್ಟು, ಪ್ರೊ|ಶೇಖರ ಇಡ್ಯ, ಮೂಲ್ಕಿಯ ಪ್ರೊ|ಡಿ.ರಘುನಾಥ ರಾವ್… ಹೀಗೆ ಒಂದಿಡೀ ಹಳೆಯ ತಲೆಮಾರಿನ ಭಾಷಾ ಉಪನ್ಯಾಸಕರು ಅವರ ಬದ್ಧತೆ, ವೃತ್ತಿಯ ಕುರಿತು ಪ್ರೀತಿಗಳ ಕಾರಣದಿಂದಾಗಿ ಸಾಹಿತ್ಯ-ಸಮಕಾಲೀನ ಚಿಂತನೆಗಳಲ್ಲಿ ತೊಡಗಬಲ್ಲ ಶಿಷ್ಯವೃಂದವನ್ನು ಜಿಲ್ಲೆಯಾದ್ಯಂತ ಬೆಳೆಸಿದ್ದರು. ಅವರ ನೆಟ್ವರ್ಕಿಂಗ್ ಕೂಡ ಕುತೂಹಲಕರವಾಗಿತ್ತು. ಈ ತಲೆಮಾರು ಕೇವಲ ತಮ್ಮ ವಿದ್ವತ್ತಿಗಿರುವ ಅವಕಾಶಗಳನ್ನು ಅರಸಿ ಹೊರಟಿದ್ದರೆ, ಬೆಳೆಯುವ ದೊಡ್ಡದೊಡ್ಡ ಅವಕಾಶಗಳು ಅವರೆದುರು ಇರುತ್ತಿದ್ದವೇನೋ. ಅವರು ಹಾಗೆ ಮಾಡದೆ ತಮ್ಮ ಶಿಷ್ಯರ ಬೆಳವಣಿಗೆಯಲ್ಲೇ ತೃಪ್ತಿ ಕಂಡರು. ಅವರ ಮುಂದಿನ ಪೀಳಿಗೆಯವರು, ಚಿಂತಿಸಬಲ್ಲ ಶಿಷ್ಯವೃಂದವನ್ನೂ ಬೆಳೆಸಿಕೊಂಡರು; ಜೊತೆಗೇ ವೈಯಕ್ತಿಕವಾಗಿ ಬೆಳೆದುನಿಲ್ಲುವ ಅವಕಾಶಗಳತ್ತಲೂ ಗಮನ ಹರಿಸಿದರು. ಆ ಪೀಳಿಗೆಯ ಪ್ರಾತಿನಿಧಿಕ ರೂಪ ಪುರುಷೋತ್ತಮ ಬಿಳಿಮಲೆಯವರು. ಆ ಕಾರಣಕ್ಕಾಗಿಯೇ ಈವತ್ತು ಬಿಳಿಮಲೆ ಅವರಿಗೆ ಕರ್ನಾಟಕದಾದ್ಯಂತ ಅಥವಾ ಅವರೇ ಹೇಳಿಕೊಂಡಂತೆ ದೇಶ-ವಿದೇಶಗಳಲ್ಲೂ ಶಿಷ್ಯಬಳಗ ಸಿಗುವುದು ಸಾಧ್ಯವಾಯಿತು.

ನನ್ನ ಚಿಂತೆ ಇರುವುದು ಈಗಿನ ಪೀಳಿಗೆಯ ಉಪನ್ಯಾಸಕರ ಕುರಿತು. ಈ ಪೀಳಿಗೆ ಈಗ ಕೇವಲ ತಮ್ಮ ಅವಕಾಶ-ಬೆಳವಣಿಗೆಗಳತ್ತ ಸ್ವಾರ್ಥಮುಖ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಬಗ್ಗೆಯಾಗಲೀ ತಮ್ಮ ಶಿಕ್ಷಕ ವೃತ್ತಿಯ ಬಗ್ಗೆಯಾಗಲೀ ಬದ್ಧತೆ-ಪ್ರೀತಿ ಹೊಂದಿರುವುದು ಕಾಣಿಸುತ್ತಿಲ್ಲ. ಹೆಚ್ಚೆಂದರೆ, ಅವರಿಗೆ ಕುರುಡು ಅಭಿಮಾನಿ ಬಳಗಗಳಿವೆ. ತಮ್ಮ ವಿದ್ಯಾರ್ಥಿಗಳಲ್ಲಿ ಯೋಚಿಸುವ ಶಕ್ತಿಯನ್ನು ಬೆಳೆಸುವಲ್ಲಿ ಈ ಪೀಳಿಗೆ ಬಹುತೇಕ ವಿಫಲರಾಗುತ್ತಿದ್ದಾರೆ; ಅದರ ಫಲಿತಾಂಶಗಳೂ ನಮ್ಮ ಸಾರ್ವಜನಿಕ ಬದುಕಿನ ಚಹರೆಗಳಲ್ಲಿ ಎದ್ದು ಕಾಣಿಸತೊಡಗಿವೆ.

ಈ ಹೊಸ ಪೀಳಿಗೆಯ ಭಾಷಾ ಉಪನ್ಯಾಸಕರು ತಾವೆಲ್ಲಿ ಹಾದಿ ತಪ್ಪಿದ್ದೇವೆ ಎಂಬ ನಿಟ್ಟಿನಲ್ಲಿ ಯೋಚಿಸಲು, ಬಿಳಿಮಲೆಯವರ ಈ ಆತ್ಮಚರಿತ್ರೆ ಪ್ರೇರಕವಾಗಲಿ ಎಂಬ ಒಂದು ಕ್ಷೀಣ ಆಸೆ…

- ರಾಜಾರಾಂ ತಲ್ಲೂರು

19 ಆಗಸ್ಟ್ 2020

* * *

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಕಾಗೆ ಮುಟ್ಟಿದ ನೀರು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/kaage-muttida-neeru

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಎಚ್ ಎಸ್ ರಾಘವೇಂದ್ರ ರಾವ್ ಅವರು ಅನುವಾದಿಸಿರುವ ರೈನರ್ ಮರಿಯಾ ರಿಲ್ಕ ಕವಿತೆಗಳ ಸಂಗ್ರಹ 'ಮಂಜಿನ ಶಿವಾಲಯಕ್ಕೆ...' ಕೃತಿ ಕುರಿತು ಡಾ.ಜಾಜಿ ದೇವೇ...
19/08/2026

ಎಚ್ ಎಸ್ ರಾಘವೇಂದ್ರ ರಾವ್ ಅವರು ಅನುವಾದಿಸಿರುವ ರೈನರ್ ಮರಿಯಾ ರಿಲ್ಕ ಕವಿತೆಗಳ ಸಂಗ್ರಹ 'ಮಂಜಿನ ಶಿವಾಲಯಕ್ಕೆ...' ಕೃತಿ ಕುರಿತು ಡಾ.ಜಾಜಿ ದೇವೇಂದ್ರಪ್ಪ ಅವರ ಟಿಪ್ಪಣಿ...

* * *

ರೈನರ್ ಮರಿಯಾ ರಿಲ್ಕ ಜೆಕ್ ರಿಪಬ್ಲಿಕ್‌ನ ಕವಿ. ಸಮಕಾಲೀನರಾಗಿದ್ದ ದಾಸ್ತೋವಸ್ಕಿ, ಬೋದಿಲೇರ, ಟಾಲ್ಸ್ಟಾಯ್, ನೀಷೆಯವರಂತೆ ಪ್ರಸಿದ್ಧನಾದ ಕವಿ. ಕಾವ್ಯದ ಮೂಲಕ ಮನುಷ್ಯನ ಆಗಮಿಕ ವೈಚಾರಿಕ ಆಳಗಳನ್ನು ಕಾವ್ಯದ ಮುಖೇನ ಸೂಕ್ಷ್ಮವಾಗಿ ನೇಯ್ದವ. ಆ ಕಾಲದಲ್ಲಿ ಯುರೋಪಿನಾದ್ಯಂತ ಯುದ್ಧೋನ್ಮಾದವಿದ್ದಾಗ ರಿಲ್ಕ ಕಾವ್ಯೋನ್ಮಾದದಲ್ಲಿ ತೇಲಾಡುತ್ತ ಮನುಷ್ಯ ಬದುಕಿನ ದಡಗಳನ್ನುಶೋಧಿಸಿದವನು.

ರಿಲ್ಕನ ಆಯ್ದ ಕವಿತೆಗಳನ್ನು ವಿಮರ್ಶಕ ಎಚ್ ಎಸ್ ಆರ್ ಕನ್ನಡೀಕರಿಸಿದ್ದಾರೆ. 'ಮಂಜಿನ ಶಿವಾಲಯಕ್ಕೆ' ಎಂಬ ಅಲ್ಲಮನ ವಚನದ ಸಾಲೇ ಇದರ ಶೀರ್ಷಿಕೆ. ಅನುವಾದಕರು ನೀಡಿದ ದೀರ್ಘ ಮುನ್ನುಡಿಯಲ್ಲಿ ರಿಲ್ಕನ ಪೂರ್ಣ ಪರಿಚಯವಾಗುತ್ತದೆ. ತುಂಬ ಆಪ್ತವಾದ ಭಾಷಾಂತರ ಮಾಡಿದ್ದಾರೆ. ಎಚ್ ಎಸ್ ಆರ್ ಅವರ ಮಾಗಿದ ಅನುಭವ ಅನುವಾದಕ್ಕೆ ಹೊಸ ಶಕ್ತಿ ನೀಡಿದೆ. ಕನ್ನಡದ ಹೆಮ್ಮೆಯ ಪ್ರಕಾಶನ ಪಲ್ಲವದ ಪ್ರಕಟಣೆ ಇದು. ನನಗೆ ಇಷ್ಟವಾದ ಕೆಲವು ಕವಿತೆಗಳ ಸಾಲು ಹೀಗಿವೆ...

ಕಿತ್ತುಬಿಡು ಕಣ್ಣುಗಳನ್ನು ಆಗಲೂ ನಿನ್ನನ್ನು ನೋಡಬಲ್ಲೆ
ಕಳಚಿ ಹೋಗಲಿ ಶಬ್ದ ಸುಖ ಕಿವಿಯಿಂದ ನಿನ್ನ ದನಿ ಕೇಳಬಲ್ಲೆ

*

ನಮ್ಮ ನಡುವಿನ ಗೋಡೆ ಬಹಳ ತೆಳುವಾಗಿದೆ
ಒಬ್ಬರ ಕೂಗು ‌ಒಡೆಯಬಾರದೇಕೆ
ಸುಲಭವಾಗಿ ಕುಸಿದು ಬೀಳುತ್ತದೆ

*

ಪುಡಿ ಮಾಡಿರಿ ಘಂಟೆಗಳನ್ನು ಅದ ಕೇಳುವವರಾರು
ಇದು ಮೌನದ ಋತುಮಾನ
ಮಾಗಿದೆ ಮಾಗಿಯ ಕಾಲ

*

ಆವಿಯಾಯಿತು ಕಣ್ಣಹನಿ ಕಟ್ಟಕಡೆಗೆ
ಖಾಲಿ ಉಳಿದೆ ನಾನು

*

ನಿನ್ನ ಮನೆ ಅದುವೆ ಕೊನೆ ಬಳಿಕ ಹಿರಿಬಯಲು
ಯಾರಾದರೂ ನೀನು ಮುಸ್ಸಂಜೆ

*

ಬಾ ಇಲ್ಲಿ ನಾವಿಲ್ಲಿ ಅಳಲ ಹೊರೆ ಇಳಿಸೋಣ
ಗೊತ್ತೇನು ನಿನಗೆ ?
ನಿನ್ನ ನೆತ್ತರು ಮರಳಿ ಬಂದಿತು ನಿನ್ನ ಕರೆಯ ಕೇಳಿ

*

ಏಕೆ ನಾನು ಕುಡಿಯಲಿಲ್ಲ
ಒಲವು ತುಂಬಿದ ಆ ತುಂಬು ಮುಖದಿಂದ
ತುಟಿಯತನಕ ತಂದಾಗಲೂ ಕೂಡ

*

ನೀವು ಮನುಷ್ಯರು ಪದಗಳನ್ನು ಮುಟ್ಟುವಿರಿ ಒಣಗುತ್ತವೆ ಅವು ಸದ್ದಿರದೆ
ಎಲ್ಲ ವಸ್ತುಗಳನ್ನು ನೀವು ಕೊಲ್ಲುತ್ತೀರಿ ಮಸಣವನು ನನಗೆ ಬಿಟ್ಟು

* * *

ಪಲ್ಲವ ಪ್ರಕಾಶನ ಪ್ರಕಟಿಸಿರುವ 'ಮಂಜಿನ ಶಿವಾಲಯಕ್ಕೆ...' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/3358348/-d551c

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಡಾ. ಪುರುಷೋತ್ತಮ ಬಿಳಿಮಲೆ ಅವರ 'ಅಮರ ಸುಳ್ಯದ ರೈತ ಹೋರಾಟ' ಕೃತಿ ಕುರಿತು ಗೋಪಾಲ ಪೆರಾಜೆ ಅವರ ಟಿಪ್ಪಣಿ...* * *"ಅವಲಕ್ಕಿ ಬೆಲ್ಲದ ಬುತ್ತಿ, ಒಂ...
18/08/2026

ಡಾ. ಪುರುಷೋತ್ತಮ ಬಿಳಿಮಲೆ ಅವರ 'ಅಮರ ಸುಳ್ಯದ ರೈತ ಹೋರಾಟ' ಕೃತಿ ಕುರಿತು ಗೋಪಾಲ ಪೆರಾಜೆ ಅವರ ಟಿಪ್ಪಣಿ...

* * *

"ಅವಲಕ್ಕಿ ಬೆಲ್ಲದ ಬುತ್ತಿ, ಒಂದು ಕತ್ತಿ ಜಗಲಿಯಲ್ಲಿ ಸದಾ ಇರುತ್ತಿತ್ತು. ದಂಡಿಗೆ ಯಾವುದೇ ಕ್ಷಣದಲ್ಲಿ ಕರೆ ಬರಬಹುದು"- ಇದು ನಮ್ಮ ಹಿರಿಯರು ನಾನು ಚಿಕ್ಕವನಿದ್ದಾಗ ಹೇಳಿದ ದಂಡಿನ ಕತೆ.

ಅಮರ ಸುಳ್ಯದ ರೈತ ಹೋರಾಟದ ಚರಿತ್ರೆ ಕುರಿತು ಎರಡನೇ ಪುಸ್ತಕ ಈಗ ಓದುಗರ ಕೈ ಸೇರುತ್ತಿರುವುದು ಸಂತೋಷ. ದೆಹಲಿಯಿಂದ ಡಾ ಪುರುಷೋತ್ತಮ ಬಿಳಿಮಲೆಯವರು ಬರೆದಿರುವ 'ಅಮರ ಸುಳ್ಯದ ರೈತ ಹೋರಾಟ'(೧೮೩೪-೧೮೩೭) ಪುಸ್ತಕದ ಸಣ್ಣ ಪರಿಚಯವನ್ನಷ್ಟೇ ಮಾಡುತ್ತಿರುವೆ.

ಸುಳ್ಯ ತಾಲೂಕಿಗೆ ಸಂಬಂಧಿಸಿದಂತೆ ಇದು ಎರಡನೇ ಪುಸ್ತಕ. ಒಂದೇ ಮಾತಲ್ಲಿ ಹೇಳುವುದಾದರೆ ಈ ಪುಸ್ತಕ ಬಹುಕಾಲದ ಬೇಡಿಕೆಯೊಂದನ್ನು ಪೂರೈಸಿದೆ. ಈ ಹಿಂದಿನ ಬರಹಗಳಲ್ಲಿ ಕಾಣದ ಸಮಗ್ರ ನೋಟವಿದು. ಈಗಾಗಲೇ ಬಂದಿರುವ ಬರಹಗಳು ಮತ್ತು ಹೇಳಿಕೆಗಳಲ್ಲಿ ಘಟನೆಯನ್ನು 'ಸ್ವಾತಂತ್ರ್ಯ ಹೋರಾಟ'ವಾಗಿ ಜಾತಿಯ 'ಮೇಲ್ಮೈಯ' ಸಂಗತಿಯಾಗಿ ಕಂಡವರೇ ಜಾಸ್ತಿ. ಬಹುಶಃ ಸುಳ್ಯ ಪರಿಸರದ ಅರೆಬಾಸೆ ಗೌಡರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಇದಕ್ಕೆ ಕಾರಣ. ಇತಿಹಾಸದ ಈ ಸತ್ಯ ಸಂಗತಿಯನ್ನು ನಿರಾಕರಿಸಲಾಗದು.

ಅಮರ ಸುಳ್ಯದ ರೈತ ಹೋರಾಟ ಕುರಿತಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ ಮತ್ತು ಯುದ್ಧ ಸ್ಮಾರಕ ನಿರ್ಮಾಣಕ್ಕೆ ಮನವಿಗಳ ಹಿಡಿದು ಓಡಾಡುವ ಸಂದರ್ಭಗಳಲ್ಲಿ ಜನ ನನ್ನನ್ನು ಎರಡು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಒಂದು ಈ ಕುರಿತಾದ ಯಾವುದಾದರೂ ಪುಸ್ತಕ ಇದೆಯೇ? ಇನ್ನೊಂದು ಅರೆಭಾಷೆ ಗೌಡರೆಂದರೆ ಯಾರು? ಅವರ ಮೂಲವೆಲ್ಲಿ? ಈ ಎರಡೂ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ೧೮೩೭ರ ಘಟನೆ ಆಳರಸರ ವಿರುದ್ಧ ನಡೆದ ರೈತ ಹೋರಾಟ. ಇದರಲ್ಲಿ ಪಾಲ್ಗೊಂಡ ರೈತರೂ ಇನ್ನಿತರರು ಬ್ರಿಟಿಷರನ್ನು ವಿರೋಧಿಸಿದರು ಮಾತ್ರವಲ್ಲ ತಮ್ಮ ನೆಲದಿಂದ ಅವರನ್ನು ಹೊರಹಾಕಲು ಒಂದಾಗಿ ನಿಂತರು. ಹಾಗೆ ಹೇಳುವುದಾದರೆ ರೈತರು ಇತಿಹಾಸದುದ್ದಕ್ಕೂ ತಮ್ಮ ಮೇಲೆ ದೌರ್ಜನ್ಯ ದಬ್ಬಾಳಿಕೆ ಎಸಗಿದವರ, ಪೋಷಣೆಗೆ ಒಳಪಡಿಸಿದವರ, ಎಲ್ಲದಕ್ಕಿಂತಲೂ ಮಿಗಿಲಾಗಿ ಅನ್ನ ಬೆಳೆದವರ ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಸೆಟೆದು ನಿಂತಿದ್ದಾರೆ. ಅವರಿಗೂ ಗೊತ್ತು, ಅನ್ನವಿದ್ದರೆ ಮಾತ್ರ ದೇಶ ರಾಜ್ಯ.

ಪುಸ್ತಕದಲ್ಲಿ ಬ್ರಿಟಿಷ್ ಪೂರ್ವ ಮತ್ತು ಬ್ರಿಟಿಷ್ ಕಾಲದಲ್ಲಿ ನಡೆದ ರೈತ ಹೋರಾಟದ ಚಿತ್ರಣವಿದೆ. ಇಂದು ಪ್ರಮುಖವಾಗಿ ದೆಹಲಿ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಯಲ್ಲಿ ಸಕ್ರಿಯರಾಗಿರುವ ಬಿಳಿಮಲೆಯವರು, ಮಡಿದ ರೈತರಿಗೆ ತಮ್ಮ ಪುಸ್ತಕದ ಅರ್ಪಣೆಯಲ್ಲಿ ಸ್ಥಾನ ಕೊಟ್ಟಿರುವುದು ಅವರ ಕಾಳಜಿಯ ದ್ಯೋತಕ. ಪುಸ್ತಕದಲ್ಲಿ ಅರೆಭಾಷೆ ಜನಾಂಗದ ವಲಸೆ ಇತಿಹಾಸ, ಜನಾಂಗದ ಒಳ ಆಡಳಿತ ವ್ಯವಸ್ಥೆ, ಹೋರಾಟಕ್ಕೆ ಬಲತುಂಬಿದ ಅರೆಭಾಷೆ ಜನಾಂಗದ ಆಡಳಿತ ಕೇಂದ್ರ ಸ್ಥಾನ ಕಟ್ಟೆಮನೆಯ ಅಂದಿನ ಹಿರಿಯ ಮಲ್ಲಪ್ಪ ಗೌಡ, ಮುಂದಾಳು ಕೆದಂಬಾಡಿ ರಾಮಯ್ಯ ಗೌಡ ಮತ್ತು ಅವರ ಜೊತೆಗಾರರ ಮಾಹಿತಿಯಿದೆ. ರೈತ ಹೋರಾಟದಲ್ಲಿ ಭಾಗಿಯಾಗಿದ್ದ ವಿವಿಧ ಜಾತಿಯ, ಧರ್ಮದ, ಆದಿವಾಸಿ ಜನರ ವಿವರಗಳು, ಹೋರಾಟಕ್ಕೆ ಕಾರಣವಾದ ಅಂಶಗಳು, ಅದರ ತಂತ್ರಗಳು, ಮುಖ್ಯ ಘಟನಾ ಸ್ಥಳಗಳು, ಅದರ ವಿಫಲತೆ ಸಫಲತೆಗಳು, ಬಲಿದಾನಗಳನ್ನು ಪುಸ್ತಕ ಪರಿಚಯಿಸುತ್ತದೆ. ಖಂಡಿತ ಆಸಕ್ತರು ಓದಲೇಬೇಕಾದ ಪುಸ್ತಕವಿದು.

ಬಿಳಿಮಲೆಯವರು ಅಂದಂತೆ ಈ ಕ್ಷೇತ್ರದಲ್ಲಿ ಇನ್ನಷ್ಟು ಆಳವಾದ ಅಧ್ಯಯನದ ಅಗತ್ಯವಿದೆ. ಮುಂದೆ ಯಾರಾದರೂ ಅದನ್ನು ಕೈಗೆತ್ತಿಕೊಳ್ಳಬಹುದು. ಮಂಗಳೂರು ವಿ.ವಿ ಈ ಕುರಿತಾಗಿ ಆಳವಾದ ಅಧ್ಯಯನಕ್ಕೆ ಪೀಠವೊಂದನ್ನು ಸ್ಥಾಪಿಸಬೇಕು.

ಕಾಡುವ ಪ್ರಶ್ನೆ ಏನೆಂದರೆ, ಆಧುನಿಕ ಪರಿಕಲ್ಪನೆಯ 'ಸ್ವಾತಂತ್ರ್ಯ'ವನ್ನು ದೇಶ ರಾಷ್ಟ್ರಗಳಿಗೆ ಅನ್ವಯಿಸಿ ನೋಡುತ್ತೇವೆ. ಆದರೆ ಸಣ್ಣ ಸಮುದಾಯಗಳು ತಮ್ಮ ಮೇಲೆ ಇನ್ನೊಬ್ಬರು ಎಸಗುವ ದಬ್ಬಾಳಿಕೆ ವಿರುದ್ಧ ನಡೆಸುವ ಹೋರಾಟಗಳನ್ನು ಏನೆಂದು ಕರೆಯುವುದು? ಅಮರ ಸುಳ್ಯದ ರೈತ ಹೋರಾಟವನ್ನು ಈಗ 'ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟ' ಎಂದೇ ಬಿಂಬಿಸಲಾಗುತ್ತಿರವುದು ಎಲ್ಲರಿಗೂ ತಿಳಿದ ಸಂಗತಿ.

- ಗೋಪಾಲ ಪೆರಾಜೆ

18 ಆಗಸ್ಟ್ 2021

* * *

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಅಮರ ಸುಳ್ಯದ ರೈತ ಹೋರಾಟ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/amr-sullyd-re-t-heuu-raatt-1834-1837-ca95b

ಅಕ್ಷತಾ ಹುಂಚದಕಟ್ಟೆ ಅವರು ನಿರೂಪಿಸಿರುವ ಕಡಿದಾಳು ಶಾಮಣ್ಣನವರ ಆತ್ಮಕಥನ 'ಕಾಡ ತೊರೆಯ ಜಾಡು', ಎಚ್ ಎಸ್ ಶಿವಪ್ರಕಾಶ ಅವರು ಅನುವಾದಿಸಿರುವ ಜಿಂಗೋ...
18/08/2026

ಅಕ್ಷತಾ ಹುಂಚದಕಟ್ಟೆ ಅವರು ನಿರೂಪಿಸಿರುವ ಕಡಿದಾಳು ಶಾಮಣ್ಣನವರ ಆತ್ಮಕಥನ 'ಕಾಡ ತೊರೆಯ ಜಾಡು', ಎಚ್ ಎಸ್ ಶಿವಪ್ರಕಾಶ ಅವರು ಅನುವಾದಿಸಿರುವ ಜಿಂಗೋನಿಯಾ ಜಿಂಗೋನೆ ಅವರ ಕವಿತೆಗಳ ಸಂಕಲನ 'ಮರೆತುಹೋದ ದೊಂಬರಾಕೆ', ಎಚ್ ಎಸ್ ಶಿವಪ್ರಕಾಶ ಅವರ ಕವನ ಸಂಕಲನ 'ಮಾತು ಮಂತ್ರವಾಗುವವರೆಗೆ', ಸುಕನ್ಯಾ ಕನಾರಳ್ಳಿ ಅವರು ಕನ್ನಡಕ್ಕೆ ಅನುವಾದಿಸಿರುವ ಕಮಲಾದಾಸ್, ಮಹಾಶ್ವೇತಾದೇವಿ, ರಶೀದ್ ಜಹಾನ್ ಸೇರಿದಂತೆ ವಿವಿಧ ಲೇಖಕಿಯರ ಆಯ್ದ ಕಥೆಗಳ ಸಂಕಲನ 'ಕಥೆ ಹೇಳುವೆ', ವಿನಯಾ ಅವರ ಕಥಾ ಸಂಕಲನ 'ಉರಿ', ಜಿ ಪಿ ಬಸವರಾಜು ಅವರ ಕಥಾ ಸಂಕಲನ 'ಬೆತ್ತಲೆಯ ಬೆಳಕನುಟ್ಟು', ಜಿ ವಿ ಆನಂದಮೂರ್ತಿ ಅವರ ಪ್ರಬಂಧ ಸಂಕಲನ 'ಜಾಲಾರ ಹೂವು' ಮತ್ತು ಬೇಲೂರು ರಘುನಂದನ್ ಅವರ ಮಕ್ಕಳ ಕಥೆಗಳ ಸಂಕಲನ 'ನಿಸರ್ಗ ಮತ್ತು ಗುಬ್ಬಚ್ಚಿ' ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು...
https://www.instamojo.com/prajodaya/

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಈ ಪುಸ್ತಕಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ...* * *'ನೋವಿಗೂ ಇದೆ ಚಲನೆ' (ಕವನ ಸಂಕಲನ)ಹೇಮಾ ನಾಯಕ ಅವರ ಕವನ ಸಂಕಲನ. ಈ ಕೃತಿಗ...
17/08/2026

ಈ ಪುಸ್ತಕಗಳು ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ...

* * *

'ನೋವಿಗೂ ಇದೆ ಚಲನೆ' (ಕವನ ಸಂಕಲನ)
ಹೇಮಾ ನಾಯಕ ಅವರ ಕವನ ಸಂಕಲನ. ಈ ಕೃತಿಗೆ ೨೦೨೩ನೇ ಸಾಲಿನ ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿ ಸಂದಿದೆ.

ಅಕ್ಷರ ಸಂಗಾತ (ಆಗಸ್ಟ್-೨೦೨೪ ಸಂಚಿಕೆ)
'ಅಕ್ಷರ ಸಂಗಾತ' ಸಾಹಿತ್ಯ ಪತ್ರಿಕೆಯ ಆಗಸ್ಟ್-೨೦೨೪ರ ಸಂಚಿಕೆ

* * *

ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು...
https://prajodaya.stores.instamojo.com/

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಮೊಗಳ್ಳಿ ಗಣೇಶ್ ಅವರ 'ದೇವರ ದಾರಿ' ಕಥಾ ಸಂಕಲನದ ಕುರಿತು 'ದ ಹಿಂದೂ' ಪತ್ರಿಕೆಯಲ್ಲಿ ಕೆ ಸುಂದರ ರಾಜ್ ಅವರು ಬರೆದಿದ್ದ ಟಿಪ್ಪಣಿ ಓದಲು ಲಿಂಕ್ ಕ್...
17/08/2026

ಮೊಗಳ್ಳಿ ಗಣೇಶ್ ಅವರ 'ದೇವರ ದಾರಿ' ಕಥಾ ಸಂಕಲನದ ಕುರಿತು 'ದ ಹಿಂದೂ' ಪತ್ರಿಕೆಯಲ್ಲಿ ಕೆ ಸುಂದರ ರಾಜ್ ಅವರು ಬರೆದಿದ್ದ ಟಿಪ್ಪಣಿ ಓದಲು ಲಿಂಕ್ ಕ್ಲಿಕ್ಕಿಸಿ...
https://www.thehindu.com/books/a-creative-response-to-real-stories/article24704954.ece

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ದೇವರ ದಾರಿ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/devara-daari

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಎಂ.ಎಸ್.ರಘುನಾಥ್ ಅವರು ಕನ್ನಡಕ್ಕೆ ಅನುವಾದಿಸಿರುವ ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್ ಕತೆಗಳ ಸಂಕಲನ 'ಕರ್ನಲ್‌ಗೆ ಯಾರೂ ಬರೆಯುವುದಿಲ್ಲ' ಕುರಿ...
16/08/2026

ಎಂ.ಎಸ್.ರಘುನಾಥ್ ಅವರು ಕನ್ನಡಕ್ಕೆ ಅನುವಾದಿಸಿರುವ ಗಾಬ್ರಿಯೇಲ್ ಗಾರ್ಸಿಯಾ ಮಾರ್ಕ್ವೇಜ್ ಕತೆಗಳ ಸಂಕಲನ 'ಕರ್ನಲ್‌ಗೆ ಯಾರೂ ಬರೆಯುವುದಿಲ್ಲ' ಕುರಿತು ನಾಗರಾಜ್ ಎಸ್‌. ರಂಗಣ್ಣವರ ಅವರ ಟಿಪ್ಪಣಿ...

* * *

ಮಾರ್ಕ್ವೇಜ್ ಕೊಲಂಬಿಯಾ ಮೂಲದ ಲೇಖಕರು. ಅವರ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್' ನೊಬೆಲ್ ಪ್ರಶಸ್ತಿ ಪಡೆದಿದೆ. ತಮ್ಮ ಕಥೆಗಳಲ್ಲಿ ವಿಭಿನ್ನ ರೀತಿಯ ಒಂದು 'ಮ್ಯಾಜಿಕಲ್ ರಿಯಾಲಿಸಮ್' ಅಂದರೆ 'ಮಾಂತ್ರಿಕ ವಾಸ್ತವ'ವನ್ನು ಬಳಸುವಲ್ಲಿ ಲೇಖಕರು ಅದ್ವಿತೀಯರು.

ಪ್ರಸ್ತುತ ಅವರ 'ಕರ್ನಲ್‌ಗೆ ಯಾರೂ ಬರೆಯುವುದಿಲ್ಲ' ಕೃತಿಯು ಸೇನೆಯಿಂದ ನಿವೃತ್ತಿ ಹೊಂದಿದ ಕರ್ನಲ್‌ ಒಬ್ಬರ ಕಥೆಯನ್ನು ಹೇಳುತ್ತದೆ. ಕರ್ನಲ್ ತನ್ನ ಪಿಂಚಣಿ ನಿರೀಕ್ಷೆಯಲ್ಲಿ ಅಂಚೆ ಕಚೇರಿಯಿಂದ ಬರುವ ಪತ್ರಕ್ಕಾಗಿ ಇಡೀ ಜೀವನ ಕಳೆಯುತ್ತಾನೆ. ಅವನಿಗೆ ತನ್ನ ಹೆಂಡತಿ ಮತ್ತು ಹತ್ಯೆಗೆ ಈಡಾಗಿ ಸತ್ತುಹೋದ ಮಗ ಬಿಟ್ಟುಹೋದ ಹುಂಜ ಇವೆರಡೇ ಸರ್ವಸ್ವ.

ಈ ಕಥೆ ಹೆಚ್ಚು ಕಡಿಮೆ ನಮ್ಮ ತೇಜಸ್ವಿಯವರ 'ತಬರನ ಕಥೆ'ಯನ್ನು ಹೋಲುತ್ತದೆ. ಆದರೂ ಈ ಕೃತಿಗಳು ತಮ್ಮ ನಿರೂಪಣೆಯ ಶೈಲಿಯಿಂದ ವಿಭಿನ್ನವಾಗೇ ಇವೆ.

ಮಾರ್ಕ್ವೇಜ್ ಅವರ ಕೃತಿಗಳನ್ನು ಟಿ ಪಿ ಅಶೋಕ ಮತ್ತು ಎಸ್ ದಿವಾಕರ್ ಅವರು ಸಾಕಷ್ಟು ವಿಮರ್ಶಿಸಿ ವಿಶ್ಲೇಷಿಸಿದ್ದಾರೆ. ಅವರ ವಿಮರ್ಶೆಗಳೇ ಮಾರ್ಕ್ವೇಜ್ ಕೃತಿಗಳನ್ನು ಓದಲು ಉತ್ತಮ ಪೀಠಿಕೆಯಾಗಬಲ್ಲವು.

ಸದ್ಯದ ಕೃತಿಯನ್ನು ಪ್ರೊ.ಎಂ.ಎಸ್.ರಘುನಾಥ್ ಅವರು ಕನ್ನಡಕ್ಕೆ ಸರಳವಾಗಿ ಅನುವಾದಿಸಿದ್ದಾರೆ. ಅವರ ಪ್ರಯತ್ನ ಪ್ರಶಂಸನೀಯ.

- ನಾಗರಾಜ್ ಎಸ್‌. ರಂಗಣ್ಣವರ

16-8-2019

* * *

ಆಕೃತಿ ಪುಸ್ತಕ ಪ್ರಕಾಶನ ಪ್ರಕಟಿಸಿರುವ 'ಕರ್ನಲ್‌ಗೆ ಯಾರೂ ಬರೆಯುವುದಿಲ್ಲ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/3358446/-01a37

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

Address

Vidyanagar
Hassan
573202

Alerts

Be the first to know and let us send you an email when Prajodayaprakashana posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajodayaprakashana:

Shortcuts

Share