Shopping Online 2

Shopping Online 2 ಕನ್ನಡ ಪುಸ್ತಕ ಭಂಡಾರ. ಜ್ಞಾನಕ್ಕೆ ಸರಿಸಾಟ?

’ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಅಣಿಮುತ್ತು. ಪ್ರಪಂಚದಲ್ಲಿ ಬೆಳವಣಿಗೆಗೆ ವಿಶೇಷ ಪ್ರಾಶಸ್ತ್ಯವುಂಟು. ಯಾವ ನಾಗರಿಕತೆ ಹಾಗೂ ಸಂಸ್ಕೃತಿ ಸಮೃದ್ಧವಾಗಿರುತ್ತದೆಯೋ ಅದು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳು ಪ್ರಪಂಚದಾದ್ಯಂತ ಕಾಣ ದೊರೆಯುತ್ತವೆ.
ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ. ಜ್ಞಾನದ ಬೊಕ್ಕಸ ತುಂಬಿದಂ

ತೆಲ್ಲ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ.

’ನಮ್ಮೊಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿಗರಾಗಿರುವುದಿಲ್ಲ ಎನ್ನುತ್ತಾರೆ - ಈ ದೇಶದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಕೃಷ್ಣನ್. ’ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ’ ಎನ್ನುತ್ತಾರೆ ಜಾನ್ ವಿಲ್ಟನ್.

ಆದರೆ ನಮ್ಮ ಕಣ್ಮುಂದೆ ಪುಸ್ತಕಗಳಿವೆ; ಕೊಳ್ಳುವ ವ್ಯವಸ್ಥೆ ಸರಿಯಾಗಿಲ್ಲ. ಒಂದೊಂದು ಪುಸ್ತಕವೂ ಒಂದೊಂದು ಪ್ರಬುದ್ದ ಮೆದುಳಿನ ಫಲ. ಅದನ್ನು ಸಾಯಿಸಬಾರದು ಎಂಬ ಪರಿಜ್ಞಾನ ನಮ್ಮ ಬಹುಸಂಖ್ಯೆ ಜನರಿಗೂ ಇಲ್ಲ; ಜನಪ್ರತಿನಿಧಿಗಳಿಂದ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೂ ಇಲ್ಲ.

20/09/2015
http://sobagu.in/76Lj9
05/09/2015

http://sobagu.in/76Lj9

Vishwaguru bharatha, By Chakravarthi Sulibele at palimarumatha on USTREAM Hinduism

ಮಲೆಗಳಲ್ಲಿ ಮದುಮಗಳು
12/12/2014

ಮಲೆಗಳಲ್ಲಿ ಮದುಮಗಳು

ಮಾಲ್ಗುಡಿ ಡೇಸ್ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ 'ಮಾಲ್ಗುಡಿ' ಎನ್ನುವ ಕಾಲ್ಪ...
16/04/2014

ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ 'ಮಾಲ್ಗುಡಿ' ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ 'ಮಾಲ್ಗುಡಿ' - "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಾಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.

ಹಿನ್ನೆಲೆ

ಮಾಲ್ಗುಡಿ ಡೆಸ್ ದಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗು ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದರು. ದಾರವಾಹಿಯ ಎಲ್ಲಾ ಭಾಗಗಳನ್ನೂ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ದಾರವಾಹಿಯ ಒಂದೊಂದು ಭಾಗವೂ ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.

ಪಾತ್ರಗಳು

ಡಬ್ಲು. ಎಸ್.ಸ್ವಾಮಿನಾಥನ್(ಸ್ವಾಮಿ) - ಮಾಸ್ಟರ್ ಮಂಜುನಾಥ
ಸ್ವಾಮಿಯ ತಂದೆ- ಗಿರೀಶ್ ಕಾರ್ನಾಡ್
ಸ್ವಾಮಿಯ ತಾಯಿ- ವೈಶಾಲಿ ಕಾಸರವಳ್ಳಿ
ಸ್ವಾಮಿಯ ಅಜ್ಜಿ - ಬಿ. ಜಯಶ್ರೀ
ಮುನಿಯಾ(ಮಿನಿ) - ಕಂಟಿ ಮಾಡಿಯ
ಮುನಿಯಾನ ಹೆಂಡತಿ - ಬಿ. ಜಯಶ್ರೀ
ವ್ಯಾಪಾರಿ - ಸೋಮು
ಅಮೇರಿಕಾದ(ನ್ಯೂಯಾರ್ಕನ ಪ್ರವಾಸಿಗ) - ಟೆಡ್ಡಿ ವೈಟ್
ಡೇವಿನ್ ಭೋಜನಿ -ನಿತ್ಯಾ

ನಟರುಗಳು

ಅನಂತ್ ನಾಗ್ (ಧಾರಾವಾಹಿ ೧೦ and ೩೨-೩೯)
ವೈಶಾಲಿ ಕಾಸರವಳ್ಳಿ
ದಾದಾ (ಧಾರಾವಾಹಿ ೩೦ ಮತ್ತು ೩೧)
ಗಿರೀಶ್ ಕಾರ್ನಾಡ್
ವಿಷ್ಣುವರ್ಧನ್ (ಧಾರಾವಾಹಿ ೧೮)
ಶಂಕರ್ ನಾಗ್(ಧಾರಾವಾಹಿ ೩೦ ಮತ್ತು ೩೧)
ರಮೇಶ ಭಟ್ಟ
ಪದ್ಮಿನಿ ಶಿರಿಶ್
ಅರುಂಧತಿ ನಾಗ್
* ಡೇವಿನ್ ಭೋಜನಿ
ರಘುರಾಮ್ ಸೀತಾರಾಮ್

Malgudi Dinagalu (ka) (Kannada) - Buy Malgudi Dinagalu (ka) (Kannada) by narayan, r. k.|author; ramachandra swamy, dr. h.|translator only for Rs. 135.00 at Flipkart.com. Only Genuine Products. 30 Day Replacement

 #ಕಲಾಸಂಪದ,  #ಕನ್ನಡಪುಸ್ತಕ  #ಶೈಕ್ಷಣಿಕವಿಷಯಅಗಣಿತ ವಿಸ್ಮಯಮುದ್ರಣ: 2013ಲೇಖಕರು: ರೋಹಿತ್ ಚಕ್ರತೀರ್ಥಪ್ರಕಾಶಕರು: ನವಕರ್ನಾಟಕ ಪ್ರಕಾಶನಮೊದಲ ...
25/02/2014

#ಕಲಾಸಂಪದ, #ಕನ್ನಡಪುಸ್ತಕ #ಶೈಕ್ಷಣಿಕವಿಷಯ

ಅಗಣಿತ ವಿಸ್ಮಯ

ಮುದ್ರಣ: 2013
ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ಮೊದಲ ಲೇಖನ ‘ಬಿಂದು’ವಿನಿಂದ ಪ್ರಾರಂಭಿಸಿ ಗಣಿತದಲ್ಲಿ ಬೆಚ್ಚಿಬೀಳಬಹುದಾದ ಹಲವು ಆಯಾಮಗಳನ್ನು ವಿವರಿಸಿ, ಬೆರಗುಗೊಳಿಸುವ ಗಣಿತದ ವಿಸ್ಮಯಲೋಕವೊಂದನ್ನು ನಮಗೆ ತಿಳಿಸಿಕೊಡುವ ಕೃತಿಯಿದು. ಗಣಿತದಲ್ಲಿ ಶೂನ್ಯಕ್ಕೆ ಪ್ರಾಧಾನ್ಯ ಬಹಳ. ಗಣಿತವೆಂದರೆ ಅದೊಂದು ಕರಾರುವಾಕ್ಕಾದ ಲೆಕ್ಕಾಚಾರ, ಅದಕ್ಕೆ ಪುಟ್ಟದು - ದೊಡ್ಡದು ಎಂಬ ತಾರತಮ್ಯವಿಲ್ಲ; ಎಲ್ಲವನ್ನೂ ಅದು ಕೂಡಿ-ಕಳೆದು-ಗುಣಿಸಿ-ಭಾಗಿಸುತ್ತದೆ - ಬ್ರಹ್ಮಾಂಡವನ್ನಷ್ಟೆ ಅಲ್ಲ; ಪರಮಾಣುವನ್ನೂ ಸಹ - ಇಂಥ ಹೇಳಿಕೆಯನ್ನೇ ಗಣಿತಲೋಕ ತಲೆಕೆಳಗಾಗಿ ಮಾಡಿಬಿಡಬಲ್ಲದಲ್ಲವೇ ? ಅಗಣಿತವೂ ಅನಂತವೂ ಆದ ಗಣಿತಲೋಕದಲ್ಲಿ ವಿಹಾರ ಹೊರಟರೆ ವಿಸ್ಮಯಗಳೂ - ಚಮತ್ಕಾರಗಳು - ಮನರಂಜನಾ ಸಾಧನಗಳೂ ಅಡಿಗಡಿಗೆ ನಿಮಗೆದುರಾಗುತ್ತವೆ. ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದೇ ನಿಮಗೆ ಸವಾಲಾಗುತ್ತದೆ. ಇದುವರೆಗೂ ಗಣಿತ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ತಲೆಕೆಡಿಸಿಕೊಂಡಿದ್ದೂ ಸಹ ಇದಕ್ಕಾಗಿಯೇ - ಓದಿ ಖುಷಿಪಡುವಂಥ ಲೇಖನಗಳು ಸ್ವಾರಸ್ಯವಾಗಿವೆ.

 #ಕಲಾಸಂಪದ,  #ಕನ್ನಡಪುಸ್ತಕ ನನ್ನ ಬಹುನಿರೀಕ್ಷಿತ ಪುಸ್ತಕ 'ಮಾನಸಿಕ  #ಆರೋಗ್ಯ ಸಂಗಾತಿ' ಹೊರಬಂದಿದೆ. ಮಾನಸಿಕ ಆರೋಗ್ಯ ನನ್ನ ಪ್ರೀತಿಯ ಕ್ಷೇತ್ರ...
19/02/2014

#ಕಲಾಸಂಪದ, #ಕನ್ನಡಪುಸ್ತಕ

ನನ್ನ ಬಹುನಿರೀಕ್ಷಿತ ಪುಸ್ತಕ 'ಮಾನಸಿಕ #ಆರೋಗ್ಯ ಸಂಗಾತಿ' ಹೊರಬಂದಿದೆ. ಮಾನಸಿಕ ಆರೋಗ್ಯ ನನ್ನ ಪ್ರೀತಿಯ ಕ್ಷೇತ್ರ. ಮಾನಸಿಕ ಒತ್ತಡ[stress], ಆತಂಕ [Anxiety], ಖಿನ್ನತೆ [Depression] ಮತ್ತು ಗೀಳು ಮನೋರೋಗ [OCD]- ಇವುಗಳ ಬಗ್ಗೆ ಕಾರಣ-ದುಷ್ಪರಿಣಾಮ-ಪರಿಹಾರ ಸೂಚಿಸುವ ಒಂದು ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಸುದೀರ್ಘ ಅಧ್ಯಯನ,ಸಮಾಲೋಚನೆಗಳ ಪರಿಶ್ರಮದಿಂದ ಮೂಡಿಬಂದಿರುವ ಈ ಕೃತಿ 250ಪುಟಗಳ ಗಾತ್ರದಲ್ಲಿದ್ದು ಬೆಲೆ 150ರೂ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬಹುದು. ನಿಮ್ಮೆಲ್ಲರ ಶುಭಹಾರೈಕೆ ಸದಾ ಅಪೇಕ್ಷಣೀಯ.

Mohan Vernekar

 #ಕಲಾಸಂಪದ,  #ಕನ್ನಡಪುಸ್ತಕ  #ವಿಜ್ಞಾನದೇವಕೀಟದ ರತಿರಹಸ್ಯಮುದ್ರಣ: 2013ಲೇಖಕರು: ರೋಹಿತ್ ಚಕ್ರತೀರ್ಥಪ್ರಕಾಶಕರು: ನವಕರ್ನಾಟಕ ಪ್ರಕಾಶನಸಾಹಿತ್...
18/02/2014

#ಕಲಾಸಂಪದ, #ಕನ್ನಡಪುಸ್ತಕ #ವಿಜ್ಞಾನ

ದೇವಕೀಟದ ರತಿರಹಸ್ಯ

ಮುದ್ರಣ: 2013
ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ಸಾಹಿತ್ಯಕ್ಷೇತ್ರ - ವಿಜ್ಞಾನಕ್ಷೇತ್ರಗಳಲ್ಲಿ ತೆರೆಯ ಮರೆಗೆ ಸರಿದ ಕೆಲವೊಂದು ಸಂಗತಿಗಳನ್ನು ಇಲ್ಲಿ ಎದುರಿಗೆ ತಂದು ನಿಲ್ಲಿಸಲಾಗಿದೆ. ಅಂಚಿಗೆ ಸರಿದು ಲೆಕ್ಕಕ್ಕೇ ಇಲ್ಲವೆಂಬಂತೆ ಅವಗಣಿಸಿದ ಸಣ್ಣಪುಟ್ಟ ವಿಚಾರಗಳೂ ಮಹತ್ವಪಡೆದು ಇಲ್ಲಿ ರಾರಾಜಿಸಿವೆ. ಹಲವಾರು ಕಾಯಿಲೆಗಳಿಂದ ಇಂದು ನಾವು ಮುಕ್ತಿಪಡೆದು ಆರೋಗ್ಯವಂತರಾಗಿದ್ದೇವೆ. ಅದಕ್ಕಾಗಿ ಪ್ರಯೋಗಶಾಲೆಯಲ್ಲಿ ಬಲಿಪಶುಗಳಾಗಿ ಜೀವತೆತ್ತ ಇಲಿಗಳೆ‍ಷ್ಟು ? ನಾವೆಂದಾದರೂ ಯೋಚಿಸಿದ್ದಿದೆಯೇ ? ಎಲ್ಲವೂ ಮಾನವನ ಕಲ್ಯಾಣಕ್ಕಾಗಿ ಎಂಬ ಸಮಜಾಯಿಷಿ ಇರುತ್ತದೆ. ಇಂದು ಪ್ರಪಂಚ ರೋಬೋ ತಂತ್ರಜ್ಞಾನದ ಕಡೆಗೆ ವಾಲುತ್ತಿದೆ. ಮನುಷ್ಯನಿಂದ ಸಾಧ್ಯವಾಗದ ಕೆಲಸ ರೋಬೋಗಳಿಂದ ಮಾಡಿಸುವ ಚಾಣಾಕ್ಷ ಬುದ್ಧಿಯ ನಮಗೆ ಭೂಮಿಯ ಮೇಲೆ ಮಾಡಲು ಇನ್ನೇನು ಕೆಲಸ ಉಳಿದಿದೆ ? ಗಂಗಾ ನದಿಯ ಬಗ್ಗೆ ನಾವಿಂದು ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಲೇಖನ ಇಲ್ಲಿ ನಮ್ಮ ಕಣ್ತೆರೆಸಲು ಪ್ರಯತ್ನಿಸಿದೆ. ಇಂಥ ಆಸಕ್ತಿದಾಯಕ ವಿಚಾರಗಳತ್ತ ನಮ್ಮನ್ನು ಚಿಂತಿಸುವಂತೆ ಮಾಡುವ ಬರಹಗಳು.

 #ಕಲಾಸಂಪದ,  #ಕನ್ನಡಪುಸ್ತಕ
13/02/2014

#ಕಲಾಸಂಪದ, #ಕನ್ನಡಪುಸ್ತಕ

 #ಕಲಾಸಂಪದ,  #ಕನ್ನಡಪುಸ್ತಕ  #ಜೀವನಚರಿತ್ರೆಏಳು ಸಾವಿರ ವರ್ಷ ಬದುಕಿದ ಮನುಷ್ಯಮುದ್ರಣ: 2013ಲೇಖಕರು: ರೋಹಿತ್ ಚಕ್ರತೀರ್ಥಪ್ರಕಾಶಕರು: ನವಕರ್ನಾ...
11/02/2014

#ಕಲಾಸಂಪದ, #ಕನ್ನಡಪುಸ್ತಕ #ಜೀವನಚರಿತ್ರೆ

ಏಳು ಸಾವಿರ ವರ್ಷ ಬದುಕಿದ ಮನುಷ್ಯ

ಮುದ್ರಣ: 2013
ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ಇವು ವಿಜ್ಞಾನಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ವ್ಯಕ್ತಿಚಿತ್ರಣಗಳು. ಇಲ್ಲಿನ ಹೀರೋ ಪಾಲ್ ಏರ್ಡಿಶ್. ತನ್ನ ಜೀವಿತಕಾಲದಲ್ಲಿ ಗಣಿತವನ್ನೇ ಉಸಿರಾಡುತ್ತಿದ್ದ ಈತ 83 ವರ್ಷ ಬದುಕಿದ್ದ. 80 ವಿಜ್ಞಾನಿಗಳು ಅಷ್ಟೇ ವರ್ಷ ಬದುಕಿ ಸಾಧಿಸಬಹುದಾದ್ದನ್ನು ಈತನೊಬ್ಬನೇ ಮಾಡಿದ್ದನೆಂಬ ಸ್ವಲ್ಪ ಉತ್ಪ್ರೇಕ್ಷಿತ ಲೆಕ್ಕಾಚಾರದಿಂದಾಗಿ “ಏಳು ಸಾವಿರ ವರ್ಷ” ಬದುಕಿದಂತಾಯಿತು ಎಂದು ಕಿರೀಟ ತೊಡಿಸಲಾಗಿದೆ. ಇನ್ನಿತರ ವೈದ್ಯಕೀಯ, ಗಣಿತ, ವಿಮಾನಯಾನ, ಹಡಗು ನಿರ್ಮಾಣ - ಮುಂತಾದ ವಿವಿಧ ರಂಗಗಳಲ್ಲಿ ಹೆಸರು ಗಳಿಸಿದವರ ಬಗೆಗೂ ಲೇಖನಗಳು ಇವೆ. ಕಳೆದೆರಡು ಶತಮಾನಗಳಲ್ಲಿ ಜಾಗತಿಕವಾಗಿ ಪ್ರಗತಿ ಹೊಂದಿದ ಕ್ಷೇತ್ರಗಳಲ್ಲೆಲ್ಲಾ ವಿಜ್ಞಾನದ್ದೇ ಮೇಲುಗೈ. ಇವನ್ನೆಲ್ಲಾ ಸಾಧಿಸಿದ ವಿಜ್ಞಾನಿಗಳು ಗುರಿಸಾಧನೆಗಾಗಿ ಏನೆಲ್ಲಾ ಬವಣೆ ಅನುಭವಿಸಿ, ಅಡೆತಡೆಗಳನ್ನು ಎದುರಿಸಿ ನಿಂತರೆಂದು ತಿಳಿದಾಗ ಅವರ ಬಗ್ಗೆ ಗೌರವ ಮೂಡುತ್ತದೆ. ಇಂದಿನ ವಿಲಾಸೀ ಜೀವನಕ್ಕೆ ಹೊಂದಿಕೊಂಡ ನಾವು ಓದಲೇಬೇಕಾದ ಲೇಖನಗಳು.

 #ಕಲಾಸಂಪದ,  #ಕನ್ನಡಪುಸ್ತಕ  #ವಿಜ್ಞಾನಮನಸುಗಳ ನಡುವೆ ಪುಷ್ಪಕ ವಿಮಾನಮುದ್ರಣ: 2013ಲೇಖಕರು: ರೋಹಿತ್ ಚಕ್ರತೀರ್ಥಪ್ರಕಾಶಕರು: ನವಕರ್ನಾಟಕ ಪ್ರಕ...
09/02/2014

#ಕಲಾಸಂಪದ, #ಕನ್ನಡಪುಸ್ತಕ #ವಿಜ್ಞಾನ

ಮನಸುಗಳ ನಡುವೆ ಪುಷ್ಪಕ ವಿಮಾನ

ಮುದ್ರಣ: 2013
ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ರಾಮಾಯಣದ ಹನುಮಂತ ಸಮುದ್ರವನ್ನು ಹಕ್ಕಿಯಂತೆ ಹಾರುತ್ತ ದಾಟಿಹೋಗುತ್ತಾನೆ. ರಸ್ತೆಯಲ್ಲಿ ನಡೆದಾಡಿದಷ್ಟು ಸಲೀಸಾಗಿ ನಾರದರು ಗಗನದಲ್ಲಿ ಮೂರು ಲೋಕಗಳನ್ನೂ ಕ್ರಮಿಸಿಬಿಡುತ್ತಾರೆ. ಗ್ರೀಕ್ ಪುರಾಣದ ಡಯೆದೆಲಸ್, ಇಕಾರಸ್‌ರು ರೆಕ್ಕೆ ಕಟ್ಟಿಕೊಂಡು ಬಾನಂಗಳದಲ್ಲಿ ಅಡ್ಡಾಡುತ್ತಾರೆ. ಹಕ್ಕಿಗೇನು - ಗಗನವೇ ಆಡುಂಬೊಲ! ಗರುಡ ರೆಕ್ಕೆ ಬಿಚ್ಚಿ ಮಲಗಿದಂತೆ ಆಗಸದಲ್ಲಿ ಗಿರಕಿ ಹೊಡೆಯುತ್ತದೆ. ಕೈ ಬಿಟ್ಟ ಬಲೂನು, ತವರುಮನೆಗೋಡುವ ಹೆಣ್ಣುಮಗಳ ಹಾಗೆ ಮೇಲೆ ಹಾರುತ್ತದೆ. ಬಾನಲ್ಲಿ ಗಾಳಿಪಟ ಓಲಾಡುವುದನ್ನು ನೋಡಲು ಎಷ್ಟು ಖುಷಿ! ತನಗೂ ಹಾಗೆ ಹಾರಲು ಬರುವಂತಿದ್ದರೆ ! ಹೀಗೆ ಸಾಗುತ್ತದೆ ವಿಮಾನಯಾನದ ಮಹಾಕತೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮಾನವನ ಕಲ್ಪನೆ-ಆಶೊತ್ತರಗಳು, ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ ಎನ್ನುವ ಆತನ ತುಡಿತ-ಚಡಪಡಿಕೆಗಳು ಈ ಹೊತ್ತಗೆಯ ಮುಖ್ಯ ಹೂರಣ. ಭೂಮಿಯ ಮೇಲಿದ್ದುಕೊಂಡೇ ಆಕಾಶಕ್ಕೆ ಏಣಿ ಚಾಚಿ ಸಿಗುವಷ್ಟನ್ನು ಬೊಗಸೆ ತುಂಬ ಹಿಡಿದುಬಿಡಬೇಕೆಂಬ ಮನುಷ್ಯನ ಕುತೂಹಲಬುದ್ಧಿಗೆ ಪುಷ್ಪಕ ವಿಮಾನ ಒಂದು ಪ್ರತೀಕವೂ ಹೌದು.

Address

Post Office Road
Challakere
577522

Alerts

Be the first to know and let us send you an email when Shopping Online 2 posts news and promotions. Your email address will not be used for any other purpose, and you can unsubscribe at any time.

Share