Happy Shopping 2

Happy Shopping 2 ಮಂಕುತಿಮ್ಮನ ಕಗ್ಗಗಳು: ಡಿ.ವಿ.ಜಿ.ಯವರ ಪದ್ಯ ಪುಸ್ತಕ.

ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ. ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗಾಗಲಿ, ಈ ಪುಸ್ತಕಕ್ಕಾಗಲಿ ತಕ್ಕ ಪ್ರಚಾರ ಹಾಗೂ ಗೌರವ ಸಿಕ್

ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಗಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.

ಪದ್ಯ ಶೈಲಿ

ನಾಲ್ಕು ಸಾಲುಗಳುಳ್ಳ ವಿಶಿಷ್ಟ ಶೈಲಿಯಲ್ಲಿ ಪದ್ಯಗಳನ್ನು ಬರೆಯಲಾಗಿದೆ, ಅಂಕಿತನಾಮ ಶೈಲಿಯಲ್ಲಿ ಮಂಕುತಿಮ್ಮ ಎಂದು ಸಂಬೋಧಿಸಲಾಗಿದೆ. ಮಂಕುತಿಮ್ಮ ಎಂದು ಕವಿಯು ಸಂಬೋಧಿಸಿದ್ದು ಜೀವನದ ತಿರುಳನರಿಯಬಯಸಿದ ಓದುಗರನ್ನು.

26/01/2023
https://youtu.be/ej4NoHg9vXg
26/06/2021

https://youtu.be/ej4NoHg9vXg

ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ Iಮಹಿಯಿಂ ಜಗವಾಗಿ ಜೀವವೇಷದಲಿ IIವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ Iಗಹನ ತತ್ತ್ವಕೆ...

https://youtu.be/T6cRbcnJjyg
24/06/2021

https://youtu.be/T6cRbcnJjyg

ಜೀವ ಜಡರೂಪ ಪ್ರಪಂಚವನದಾವುದೋ Iಆವರಿಸಿಕೊಂಡುಮೊಳನೆರೆದುಮಿಹುದಂತೆ IIಭಾವಕೊಳಪಡದಂತೆ ಅಳತೆಗಳವಡದಂತೆ Iಆ ವಿಶೇಷಕೆ ಮಣಿಯೋ – ಮಂಕುತಿಮ....

13/11/2020

Maranadim

https://youtu.be/8_fbazVpcAY
15/06/2019

https://youtu.be/8_fbazVpcAY

ಕರ್ಣಾಟ ಭಾರತ ಕಥಾಮಂಜರಿ | Karnata Bharata Kathamanjari ವಾಚನ: ಶ್ರೀ ಹೊಸಹಳ್ಳಿ ಕೇಶವಮೂರ್ತಿ | Vachana: Sri Hosahalli Keshavamurthy ವ್ಯಾಖ್ಯಾನ: ಶ್ರೀ ಮತ್ತೂರು ಕೃಷ್ಣಮೂರ.....

ಕುಮಾರವ್ಯಾಸ ಭಾರತ
01/12/2018

ಕುಮಾರವ್ಯಾಸ ಭಾರತ

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮ....

https://youtu.be/CECY8BGjJKA
08/10/2018

https://youtu.be/CECY8BGjJKA

ಆದಿ ಪರ್ವ, ಸಂಧಿ-೧, ಪೀಠಿಕಾ ಸಂಧಿ ಭಾರತೀಯ ವಿದ್ಯಾ ಭವನ | Bharatiya Vidya Bhawan ಕುಮಾರವ್ಯಾಸ ಭಾರತ ಆದಿ ಪರ್ವ ೧ | Kumaravyasa Bharata Adi Parva 1 ವಾಚನ: ಶ್ರೀ ಹೊಸಹಳ್ಳ...

28/10/2017

ಮಂಕುತಿಮ್ಮನ ಕಗ್ಗಗಳು: ಡಿ.ವಿ.ಜಿ.ಯವರ ಪದ್ಯ ಪುಸ್ತಕ.

24/10/2017

ಕಗ್ಗ ( ಮುಕ್ತಕ-1 )
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ | ದೇವ ಸರ್ವೇಶ ಪರಬೊಮ್ಮನೆಂದು ಜನಂ || ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ | ಆ ವಿಚಿತ್ರಕೆ ನಮಿಸೊ-ಮಂಕುತಿಮ್ಮ ||

ಪದಗಳ ವಿಸ್ತರಣೆ
ವಿಶ್ವಾದಿಮೂಲ=ವಿಶ್ವ+ಆದಿಮೂಲ, ಕಾಣದೊಡಮಳ್ತಿಯಿಂ=ಕಾಣದೊಡಂ+ಅಳ್ತಿಯಿಂ.

ಪದಗಳ ತಾತ್ಪರ್ಯ
ಪರಬೊಮ್ಮ=ಪರಬ್ರಹ್ಮ, ಕಾಣದೊಡಂ=ಕಾಣದಿದ್ದರೂ, ಅಳ್ತಿಯಿಂ=ಪ್ರೀತಿಯಿಂದ.

ಪದ್ಯದ ಪೂರ್ತಿ ವಿವರಣೆ
ಶ್ರೀವಿಷ್ಣು, ವಿಶ್ವಕ್ಕೆ ಮೂಲ, ಮಾಯಾಲೋಲ, ದೇವ, ಸರ್ವಕ್ಕೂ ಒಡೆಯನಾದ ಪರಬ್ರಹ್ಮ ಎಂದು ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವೆಲ್ಲಾ ಆತ್ಮಗಳಾದರೆ ನಮ್ಮನ್ನು ಆಳುವವನು ಪರಮಾತ್ಮ. ಅದನ್ನು ನಿಯಾಮಕ, ನಿಯಂತ್ರಕ, ದೇವರು ಎಂದೆಲ್ಲ ಕರೆಯುತ್ತಾರೆ. ಯಾರು ಏನೇ ಹೆಸರಿಟ್ಟು ಕರೆದರೂ ಅದು ಪರಮ ಶಕ್ತಿ. ಇಡೀ ಜಗತ್ತನ್ನು ಸೃಷ್ಟಿಸಿ ನಿಯಂತ್ರಿಸುವ ಒಂದು ಪರಮ ಶಕ್ತಿ. ಇದನ್ನು ಹಲವಾರು ಸದ್ಭಕ್ತರು ತಮ್ಮ ತಮ್ಮದೇ ರೀತಿಯಲ್ಲಿ ತಮ್ಮ ಅಂತರಂಗದಲ್ಲಿ ಕಂಡುಕೊಂಡು ಅನುಭವಿಸಿದ್ದಾರೆ. ಯಾರು ಹೇಗೆ ಅನುಭವಿಸಿದರೋ ಅವರಿಗೆ ಹಾಗೆ ಕಂಡಿದೆ. ನಾವಿರುವ ಭೂಮಿಯಂತಹ 9.80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ. ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಮುಕ್ತಕದ ಆಂತರ್ಯ. ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು, ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ, ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. ಅದನ್ನು ಕಂಡವರಿಲ್ಲ. ಅದರ ಲೀಲೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾದಂತಹ ಒಂದು ಪರಮ ವಸ್ತು. ಮಾನ್ಯ ಗುಂಡಪ್ಪನವರು ಅದನ್ನು "ವಿಚಿತ್ರ" ಎಂದು ಕರೆದು ಅದಕ್ಕೆ ನಮಿಸು ಎಂದು ಒಂದು ಆದೇಶವನ್ನು ಕೊಟ್ಟಿದ್ದಾರೆ. ನಾವೂ ಸಹ ನಮ್ಮ ನಮ್ಮ ಮನಸ್ಸುಗಳಲ್ಲಿ ನಮ್ಮದೇ ರೀತಿಯಲ್ಲಿ ಆ ಪರಮಾತ್ಮನೆಂಬ ವಸ್ತುವನ್ನು ಭಾವಿಸಿ ಅನುಭವಿಸಬೇಕು. ಹೃದಯದಲ್ಲಿ ತುಂಬಿಕೊಳ್ಳಬೇಕು.

goo.gl/ttrJRj

15/04/2017

Jokes Mela | ಜೋಕ್ಸ್ ಮೇಳ

ಮಂಕುತಿಮ್ಮನ ಕಗ್ಗಗಳು: ಡಿ.ವಿ.ಜಿ.ಯವರ ಪದ್ಯ ಪುಸ್ತಕ.

Address

Old Town. Opd Post Office Road
Challakere
577522

Alerts

Be the first to know and let us send you an email when Happy Shopping 2 posts news and promotions. Your email address will not be used for any other purpose, and you can unsubscribe at any time.

Share

Category