Book Circle

Book Circle Book Store

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದಲೇಖಕರು  : ಡಾ. ದತ್ರಪ್ರಸಾದ ದಾಬೋಲ್ಕರ್ಅನುವಾದ : ಚಂದ್ರಕಾಂತ ಪೋಕಳೆಬೆಲೆ       ...
13/05/2026

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದ

ಲೇಖಕರು : ಡಾ. ದತ್ರಪ್ರಸಾದ ದಾಬೋಲ್ಕರ್
ಅನುವಾದ : ಚಂದ್ರಕಾಂತ ಪೋಕಳೆ
ಬೆಲೆ : 395/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದರ ಜೀವನ ಮತ್ತು ವಿಚಾರಗಳ ಬಗೆಗೆ ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಖೇದದ ಸಂಗತಿ ಎಂದರೆ ಈ ಬರಹಗಳೆಲ್ಲ 19ನೇ ಶತಮಾನದ ಆ ಯುವಕನ ಮಾನಸಿಕ ಸಾಮರ್ಥ್ಯ, ಜೀವನ ಸಂಘರ್ಷ, ವೈಚಾರಿಕ ಮತ್ತು ಯುಗಪ್ರವರ್ತಕ ಕಾರ್ಯಗಳಿಗೆ ಆಧ್ಯಾತ್ಮವಾದಿ ಪಾರ ಲೌಕಿಕ ವ್ಯಾಖ್ಯೆಯನ್ನು ನೀಡಿ ಅದನ್ನು ಒಂದು ಮಿಥಿಕ್ ರೂಪದಲ್ಲಿ ಬದಲಾಯಿಸುತ್ತವೆ. ಅದರ ಸತ್ವವನ್ನೇ ಹೊಸಕಿ ಹಾಕುತ್ತವೆ. ಈ ಕೃತಿಯು ಪ್ರಮಾಣ ಸಹಿತ, ಖಚಿತವಾದ ತಪಶೀಲಿನೊಂದಿಗೆ ಆ ವಿವೇಕಾನಂದರನ್ನು, ಅವರ ವಾಸ್ತವ ರೂಪವನ್ನು ತೆರೆದಿಡುತ್ತದೆ. ಇದೊಂದು ಮಹಾಜೀವನದ ಎಂಥ ಪ್ರಾಮಾಣಿಕ ಗಾಥೆ ಎಂದರೆ, ಅವರ ಕಾರ್ಯಗಳನ್ನು, ಆಲೋಚನ ಕ್ರಮವನ್ನು ಮತ್ತು ಯುಗವನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದು ವಿವೇಕಾನಂದರನ್ನು ಅರ್ಥಮಾಡಿಕೊಳ್ಳುವ ಏಕೈಕ ಮತ್ತು ಅನನ್ಯವಾದ ಬೌದ್ಧಿಕ ಕಾರ್ಯವಾಗಿದೆ.

#ಸ್ವಾಮಿವಿವೇಕಾನಂದ

ಬೆತ್ತಲೆ ವೃಕ್ಷಲೇಖಕರು  : ಡಾ. ಸಿ.ಜಿ. ಲಕ್ಷ್ಮೀಪತಿಬೆಲೆ          : 340/-ಶಿಪ್ಪಿಂಗ್    : ಉಚಿತಸಂಪರ್ಕಿಸಿ : 099806 33644 ಲೈಂಗಿಕತೆಯ ಸ...
13/05/2026

ಬೆತ್ತಲೆ ವೃಕ್ಷ

ಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ
ಬೆಲೆ : 340/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಲೈಂಗಿಕತೆಯ ಸಂಕೀರ್ಣತೆಯನ್ನು ಬಿಚ್ಚಿಟ್ಟು ಪೂರ್ವಗ್ರಹಗಳನ್ನು ಕೆಣಕುವ ಮತ್ತು ಅರಿವನ್ನು ಹಿಗ್ಗಿಸುವ ವಿಶಿಷ್ಟ ಕೃತಿ ಬೆತ್ತಲೆವೃಕ್ಷ. ಭಾರತದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತಾಗಿ ನಡೆದಿರುವ ಹುಡುಕಾಟ ಮತ್ತು ಪ್ರಯೋಗಗಳ ಸುತ್ತ ಸಾಂಸ್ಕೃತಿಕ ಮುಕ್ತತೆಗಳಿರುವಂತೆಯೇ ವಿನಾಶಕಾರಿ ಮಂಡಿವಂತಿಕೆಯೂ ಇದೆ. ಸಾಮಾಜಿಕ ರಚನೆಗಳನ್ನೇ ನಿಯಂತ್ರಣ ಮಾಡಲು ಲೈಂಗಿಕತೆಯನ್ನು ಟೂಲಾಗಿ ಬಳಸಲ್ಪಡುವ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಈ ಕೃತಿ ಚರ್ಚಿಸಿದೆ.

ವೇದ, ವಾತ್ಸಾಯನನ ಕಾಮಸೂತ್ರದಂತಹ ಕೃತಿಗಳಲ್ಲಿ ಬರುವ ಲೈಂಗಿಕತೆಯ ವಿಚಾರಗಳನ್ನು ಈ ಕಾಲದ ಲೈಂಗಿಕ ರಾಜಕಾರಣದ ಜೊತೆಗಿಟ್ಟು ವಿಶ್ಲೇಷಿಸುವಂತೆಯೇ, ಗಾಂಧಿ ಮತ್ತು ಓಶೋ ಅಂತವರ ಲೈಂಗಿಕತೆಯ ಕುರಿತಾದ ದೃಷ್ಟಿಕೋನಗಳ ಚರ್ಚೆಯನ್ನು ಈ ಕೃತಿ ಒಳಗೊಂಡಿರುವುದು ಮಹತ್ವದ್ದಾಗಿದೆ.

- ಕೆ. ಮುರಳಿ ಮೋಹನ್ ಕಾಟಿ

8 ಹಣಕಾಸು ನಿಯಮಗಳುಸಂಪತ್ತು ವೃದ್ಧಿಗೆ ಸರಳ ನಿಯಮಗಳುಲೇಖಕರು  : ರಂಗಸ್ವಾಮಿ ಮೂಕನಹಳ್ಳಿಬೆಲೆ          : 230/- (ಶಿಪ್ಪಿಂಗ್ ಸೇರಿ)ಸಂಪರ್ಕಿಸಿ...
12/05/2026

8 ಹಣಕಾಸು ನಿಯಮಗಳು
ಸಂಪತ್ತು ವೃದ್ಧಿಗೆ ಸರಳ ನಿಯಮಗಳು

ಲೇಖಕರು : ರಂಗಸ್ವಾಮಿ ಮೂಕನಹಳ್ಳಿ
ಬೆಲೆ : 230/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

ಟೈಮ್ ಇಲ್ಲ, ಹಣವಿಲ್ಲ ಎನ್ನುವ ಗೊಣಗಾಟ ಜಗತ್ತಿನ 90 ಪ್ರತಿಶತ ಜನರದ್ದು! ಉಳಿದ ಹತ್ತು ಪ್ರತಿಶತ ಜನರಲ್ಲಿ ಕೂಡ ಏಳು ಪ್ರತಿಶತ ಜನ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಈ ವೇಳೆಯನ್ನು ಮತ್ತು ಹಣವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಉಳಿದವರ ಕಥೆಯೇನು? ಅದನ್ನು ಮೊದಲಿನ ಸಾಲಿನಲ್ಲಿ ಹೇಳಿದ್ದೇನೆ. ಅವರದು ನಿಲ್ಲದ ಗೊಣಗಾಟ. ಈ ಗೊಣಗಾಟ ನಿಲ್ಲಬೇಕೆಂದರೆ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇವು ಮೂಲಭೂತ ನಿಯಮಗಳು. ಇವು ತಪ್ಪಿದರೆ 90 ಪ್ರತಿಶತ ಪಟ್ಟಿಯಲ್ಲಿ ಒಬ್ಬರಾಗುವುದು ಸುಲಭ. ಒಂದು ವಿಷಯ ನೆನಪಿರಲಿ, ಜಗತ್ತು ಮುಂಬರುವ ದಿನಗಳಲ್ಲಿ ಬಹಳ ಬದಲಾಗಲಿದೆ. ನಮ್ಮ ಟಾರ್ಗೆಟ್ ಜಗತ್ತಿನ ಪ್ರಥಮ ಒಂದು ಪ್ರತಿಶತದಲ್ಲಿ ಸ್ಥಾನ ಗಳಿಸುವುದು ಆಗಿರಬೇಕಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ನಾವು ಸಾಧಿಸಲು ಸಾಧ್ಯವಾಗುವ ಟಾರ್ಗೆಟ್ ಇಟ್ಟುಕೊಳ್ಳೋಣ. ಅದನ್ನು ಸಾಧಿಸುತ್ತ ಹೋಗೋಣ. ಎಲ್ಲವೂ ಸರಿಯಾದರೆ ಒಂದು ಪ್ರತಿಶತದಲ್ಲೂ ನಾವು ಸ್ಥಾನ ಪಡೆಯಬಹುದು. ನಾವು ಜಗತ್ತಿನ ಪ್ರಥಮ 10ರಿಂದ 15 ಪ್ರತಿಶತದಲ್ಲಿ ಸ್ಥಾನ ಪಡೆದುಕೊಂಡರೆ ಇಲ್ಲಾಗುವ ಬದಲಾವಣೆಗಳು, ಅಸ್ಥಿರತೆಗಳ ನೋವು ತಟ್ಟುವುದಿಲ್ಲ. ತಟ್ಟಿದರೂ ಅದನ್ನು ತಡೆದುಕೊಳ್ಳುವ ಕ್ಷಮತೆ ನಮ್ಮಲ್ಲಿ ಉತ್ಪನ್ನವಾಗಿರುತ್ತದೆ.

 #ಹೊಸತುಚೆಗೆವಾರ ಜೊತೆಯಲ್ಲಿ ನನ್ನ ಬದುಕು ನೆನಪುಇಂಗ್ಲೀಷ್ ಮೂಲ : ಅಲೈಡಾ ಮಾರ್ಚ್ಕನ್ನಡಕ್ಕೆ    : ಡಾ. ಮಂಜುನಾಥ್ ಬಿ.ಆರ್‌.ಬೆಲೆ          : ...
12/05/2026

#ಹೊಸತು

ಚೆಗೆವಾರ ಜೊತೆಯಲ್ಲಿ ನನ್ನ ಬದುಕು ನೆನಪು

ಇಂಗ್ಲೀಷ್ ಮೂಲ : ಅಲೈಡಾ ಮಾರ್ಚ್
ಕನ್ನಡಕ್ಕೆ : ಡಾ. ಮಂಜುನಾಥ್ ಬಿ.ಆರ್‌.
ಬೆಲೆ : 260/- (ಶಿಪ್ಪಿಂಗ್ ಸೇರಿ)
ಸಂಪರ್ಕಿಸಿ : 099806 33644

ಕ್ರಾಂತಿಯ ಜೊತೆಯಲ್ಲಿಯೇ ಬೆಳೆಯುತ್ತಾ ಹೋದ ಇಬ್ಬರು ತರುಣ ಕ್ರಾಂತಿಕಾರಿಗಳ ಕಥೆ ಇದು. ಅವರ ಒಲವು ಸಹ ಹಾಗೇ ಮಾಗುತ್ತ ಹೋಗಿದೆ. ಅವರಿಬ್ಬರಲ್ಲಿ ವಯಸ್ಸಿನ ಅಂತರವಿದೆ. ಅವನು ದೊಡ್ಡ ನಾಯಕ. ಆಕೆ ಎಳೆಯ ತರುಣಿ. ಆದರೆ ಅದು ಪ್ರೇಮದಲ್ಲಿನ ಸಮಾನತೆಗೆ ಧಕ್ಕೆ ತರುವುದಿಲ್ಲ. ಚೆ ಸಾಕಷ್ಟು ದೊಡ್ಡವನಾದರೂ ಅವನಲ್ಲಿ ತುಂಟತನವಿದೆ, ಸಾಹಸವಿದೆ. ಅದೆಲ್ಲದರ ಜೊತೆಗೆ ಮಡದಿ-ಮಕ್ಕಳ ಬಗ್ಗೆ ಜವಾಬ್ದಾಲ ಸಹ ಇದೆ.

"ಎಲ್ಲಿಯೂ ನಿಲ್ಲದೆ ಮನೆಯನೆಂದೂ ಕಟ್ಟದೆ" ಅನಿಕೇತನನಾಗಲು ಹೊರಟ ಚೆ ಇಲ್ಲಿ ಅಲೈಡ ಜೊತೆ ಗೂಡು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ಬದುಕನ್ನು ತೆರೆದಿಟ್ಟ ಪುಸ್ತಕದಂತೆ, ಪಾರದರ್ಶಕವಾಗಿಡಲು ಪ್ರಯತ್ನಿಸುತ್ತಾನೆ. ಸಂಸಾರ ನನ್ನ ಕ್ರಾಂತಿಕಾರಿ ಸ್ಫೂರ್ತಿಗೆ ಸರಪಳಿಯಾಗಬಾರದು ಎಂದು ಕಳವಳಗೊಳ್ಳುತ್ತಾನೆ. ಅಲೈಡಾ ಗೂಡನ್ನು ಕಟ್ಟಬೇಕು, ಅದರಲ್ಲಿ ಮಕ್ಕಳನ್ನು ಸಾಕಬೇಕು ಎಂದು ಆಸೆಪಡುತ್ತಾಳೆ. ಚೆ ನ ಗಂಡುಮಕ್ಕಳ ಕುರಿತಾದ ಆಕರ್ಷಣೆಯನ್ನೂ ಛೇಡಿಸುತ್ತಾಳೆ. ಆದರೆ ಜೆ ಗೆ ಎಲ್ಲಾ ಮಕ್ಕಳೂ ಒಂದೇ ಎಂಬುದೂ ಸತ್ಯ.

-ಇಂತಹ ಆಪ್ತ ಕೌಟುಂಬಿಕ ವಿಷಯಗಳನ್ನು ಅಲೈಡಾ ನಿರ್ಭಿಡೆಯಿಂದ ಚರ್ಚಿಸಿದ್ದಾಳೆ. ಅವಳು ವ್ಯವಸ್ಥಿತ, ಸುಭದ್ರ ಜೀವನಕ್ಕಾಗಿ ಹಂಬಲಿಸಿ ಬದುಕಿನ ಧೈರ್ಯವನ್ನು ಮರೆಯುವಳಲ್ಲ. ಅವಳು ಕ್ರಾಂತಿಕಾರಿಗೆ ಅಡೆತಡೆ ಅಲ್ಲ, ಅವಳೊಬ್ಬ ವೇಗವರ್ಧಕಳು. ಅವಳಲ್ಲೂ ಮನೆ ಮತ್ತು ಜಗತ್ತಿನ ನಡುವೆ ಸಮತೋಲನ ಸಾಧಿಸುವ ಸಂಘರ್ಷ ಜೀವಂತವಾಗಿದೆ. ಅವರಿಬ್ಬರ ಪ್ರೇಮದಲ್ಲಿ ಸದಾ -ನಿಲ್ಲದ ಶೃತಿಯಂತೆ ಮಿಡಿಯುವುದು ಅದೇ ಸಾಮಾಜಿಕ ಬದ್ಧತೆಯೇ.

ಐದು ಮಕ್ಕಳನ್ನು ಸಲಹುತ್ತಾ ಅದೇ ಸಮಯದಲ್ಲಿ ಎಲ್ಲವನ್ನೂ ತೊರೆದು ಮತ್ತೊಮ್ಮೆ ಬಂದೂಕು ಹಿಡಿದು ಆ ಮನೆ ತೊರೆದ ಗೆಲಲ್ಲಾ ಯೋಧನ ಜೊತೆ ಸಮರಕ್ಕಿಳಿಯಬೇಕೆಂಬ ತುಡಿತ ಅವಳದ್ದು. ಹಾಗಾಗಿ ಅವಳು ಅಜ್ಞಾತವಾಸದಲ್ಲಿದ್ದ ಗಂಡನ ಜೊತೆ ಕಾಂಗೋ, ಯುರೋಪು ಎಲ್ಲೆಡೆ ಹೋಗುತ್ತಾಳೆ. ತನ್ನ ಗಂಡನಾದ ಈ ಅಮೂಲ್ಯ ವಸ್ತುವನ್ನು ಕಾಪಾಡಿಕೊಳ್ಳಬೇಕೆಂದು ಹಂಬಲಿಸುತ್ತಾಳೆ.

ವಿಶೇಷ ಕರ್ನಾಟಕಲೇಖಕರು    : ಜಿ. ಆನಂದ್ಮುಖಬೆಲೆ   : 599/-ರಿಯಾಯಿತಿ : 10%ಶಿಪ್ಪಿಂಗ್      : ಉಚಿತಸಂಪರ್ಕಿಸಿ  : 099806 33644 ಕನ್ನಡ ನಾ...
10/05/2026

ವಿಶೇಷ ಕರ್ನಾಟಕ

ಲೇಖಕರು : ಜಿ. ಆನಂದ್
ಮುಖಬೆಲೆ : 599/-
ರಿಯಾಯಿತಿ : 10%
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ಕನ್ನಡ ನಾಡು, ನುಡಿ, ನಡೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡಿಸುವ ಮತ್ತು "ಕನ್ನಡ-ಕನ್ನಡಿಗ-ಕರ್ನಾಟಕ" ದ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂತಹ ಅನೇಕ ನಾಡಿನ ಹಿರಿಮೆಗಳ ಬಗ್ಗೆ ಪರಿಚಯ ಮಾಡಿಸುವಂತಹ ಒಂದು ವಿಶಿಷ್ಟ ಪ್ರಯತ್ನವೇ ಈ "ವಿಶೇಷ ಕರ್ನಾಟಕ". ಪುಸ್ತಕ.

ಈ ಚಿತ್ರ-ಮಾಹಿತಿಯ ಸಂಗ್ರಹದ ಪುಸ್ತಕವು

1. ಕನ್ನಡಿಗರಲ್ಲಿ ತಾವೊಂದು ವಿಶಿಷ್ಟ ಅಸಾಮಾನ್ಯ ಜನಾಂಗ ಎಂಬ ಅರಿವನ್ನು ಎಚ್ಚರಗೊಳಿಸುತ್ತದೆ.
2. ಕನ್ನಡಿಗರಲ್ಲಿ ತಾವು ಕನ್ನಡಿಗರು, ಕನ್ನಡತನವೆಂಬುದು ಸಾಧನೆಗೆ ಮತ್ತೊಂದು ಹೆಸರು ಎಂಬ ಎಚ್ಚರವನ್ನು ಹುಟ್ಟುಹಾಕುತ್ತದೆ.
3. ಈ ಕನ್ನಡತನದ ಅರಿವು ನಮ್ಮೆಲ್ಲರನ್ನೂ ಒಗ್ಗೂಡಿಸಿ ಭವ್ಯವಾದ ನಾಳೆಗಳನ್ನು ಕಟ್ಟಲು ನಮ್ಮನ್ನು ಪ್ರೇರೇಪಿಸುತ್ತದೆ.
4. ಕನ್ನಡಿಗರಿಗೆ ಅಪರೂಪದ ಮಾಹಿತಿಗಳನ್ನು ಒಂದೆಡೆ ನೀಡಿ , ಜಾತಿಮತಗಳ ಅಂತರಗಳನ್ನು ಅಳಿದು ಒಂದು ಅಭೂತಪೂರ್ವ ಒಗ್ಗಟ್ಟನ್ನು ಬಲಗೊಳಿಸುತ್ತದೆ.
5. ಕನ್ನಡದ ಹಳಮೆ, ಹಿರಿಮೆ, ಮಹಿಮೆಗಳ ಬಗ್ಗೆ ಅತೀ ಮುಖ್ಯವಾಗಿ ಮಕ್ಕಳಿಗೆ ಪರಿಚಯ ಮಾಡಿಸಿ, ಕನ್ನಡತನವನ್ನು ಮುಂದಿನ ತಲೆಮಾರಿಗೂ ಒಯ್ಯಲು ಸಹಕಾರಿಯಾಗಿದೆ.

ಈ ಚಿತ್ರ-ಮಾಹಿತಿಯ ಸಂಗ್ರಹದಲ್ಲಿರುವ ವಿಷಯಗಳು

1. ರಾಜ್ಯ ಲಾಂಛನಗಳು
2. ಪ್ರಾಗಿತಿಹಾಸ - ಕನ್ನಡ ನಾಡಿನ ಹಳಮೆ
3. ಆಧ್ಯಾತ್ಮ ಕರ್ನಾಟಕ
4. ಬೃಹತ್ ಕರ್ನಾಟಕ : ಭಾಷಿಕ, ಸಾಂಸ್ಕೃತಿಕ
5. ಏಕೀಕರಣ - ನಾಡೊಂದಾದ ಕತೆ ಭಾಗ 1
6. ಏಕೀಕರಣ - ನಾಡೊಂದಾದ ಕತೆ ಭಾಗ 2
7. ಭೌಗೋಳಿಕ ಗುರುತು : ಕನ್ನಡ ನಾಡು ವೈಶಿಷ್ಟ್ಯಗಳ ಬೀಡು ಭಾಗ 1
8. ಭೌಗೋಳಿಕ ಗುರುತು : ಕನ್ನಡ ನಾಡು ವೈಶಿಷ್ಟ್ಯಗಳ ಬೀಡು ಭಾಗ 2
9. ಕನ್ನಡಿಗರು ಆಳಿದ ನಾಡು : ಕಟ್ಟಿದ ಸ್ಮಾರಕ
10. ಕನಡ ನಾಡು - ನಮ್ಮ ಕಾಡು ನಮ್ಮ ಸಂಪತ್ತು
11. ಕನ್ನಡ ನಾಡಿನ ರಂಗಭೂಮಿ ವೈಭವ
12. ಭಾರತಕ್ಕಾಗಿ ಆಡಿದ ಕರ್ನಾಟಕದ ಪ್ರಮುಖ ಆಟಗಾರರು
13. ನಮ್ಮ ಕನ್ನಡ ನಾಡು - ಬೇರೆ ಬೇರೆ ಕಾಲದಲ್ಲಿ
14. ಕರ್ನಾಟಕ - ಗಂಧದ ನಾಡು, ಚಿನ್ನದ ಬೀಡು
15. ಕನ್ನಡ ಬರಹ - ಬೆಳೆದು ಬಂದ ಹಾದಿ
16. ಕನ್ನಡ ಸಾಮ್ರಾಜ್ಯಗಳು
17. ಕನ್ನಡ ಸಾಹಿತ್ಯ : ಹೆಜ್ಜೆಗುರುತುಗಳು
18. ಸಂಗೀತಕ್ಕೆ ಕನ್ನಡ ನಾಡಿನ ಕೊಡುಗೆ
19. ಕನ್ನಡ ನಾಡು : ಕಲೆಗಳ ತವರು
20. ಕರ್ನಾಟಕದ ಪ್ರಮುಖ ವಿಜ್ಞಾನಿಗಳು
21. ಕಥೆ/ಕಾದಂಬರಿ/ನಾಟಕ ಆಧಾರಿತ ಕನ್ನಡ ಚಲನಚಿತ್ರಗಳು
22. ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರು
ಈ ಪುಸ್ತಕವು ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ಉಡುಗೊರೆಯಾಗಿ ನೀಡಲು ಅತ್ಯುತ್ತಮ ಆಯ್ಕೆ. ಕನ್ನಡದ ಹಿರಿಮೆ, ಗರಿಮೆಗಳ ಪರಿಚಯ ಮಾಡಿಕೊಡುವ ಈ ಕಾಫಿ ಟೇಬಲ್ ಪುಸ್ತಕವು ವಿಶೇಷ ಉಡುಗೊರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಓಶೋಅಷ್ಟಾವಕ್ರ ಸಂಹಿತೆಜ್ಞಾನೋದಯವೇ ಏಕೈಕ ಕ್ರಾಂತಿಮುಖಬೆಲೆ   : 270/-ಶಿಪ್ಪಿಂಗ್      : ಉಚಿತಸಂಪರ್ಕಿಸಿ   : 099806 33644 ನಾನು ಅಷ್ಟಾವಕ್...
07/05/2026

ಓಶೋ
ಅಷ್ಟಾವಕ್ರ ಸಂಹಿತೆ
ಜ್ಞಾನೋದಯವೇ ಏಕೈಕ ಕ್ರಾಂತಿ

ಮುಖಬೆಲೆ : 270/-
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

ನಾನು ಅಷ್ಟಾವಕ್ರಗೀತೆಯನ್ನು ಸುಮ್ಮನೆ ಆಯ್ಕೆ ಮಾಡಿಕೊಳ್ಳಲಿಲ್ಲ, ಬಹಳ ಸಮಯ ಕಾದಿದ್ದು, ಬಹಳ ಸಮಯ ಪರಿಶೀಲಿಸಿ ಆಯ್ದುಕೊಂಡೆ. ನಾನು ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾಗ ಅಲ್ಲಿ ದೊಡ್ಡದಾದ ಗುಂಪು ಇತ್ತು. ಗುಂಪಿಗೆ, ಜನಜಂಗುಳಿಗೆ ಅಷ್ಟಾವಕ್ರ ಬೇಡ. ಅದಕ್ಕೆ ಅರ್ಥವಿಲ್ಲ. ಬಹಳ ಶ್ರಮದಿಂದ ಗುಂಪಿನಿಂದ ನಾನು ತಪ್ಪಿಸಿಕೊಂಡೆ.

ಈಗ ಇಲ್ಲಿ ಅನೇಕ ವಿವೇಕಾನಂದರು ಇದ್ದಾರೆ. ಹೆಚ್ಚಿನ ಸಾಮರ್ಥ್ಯವಿರುವವರ ನಡುವೆ ನಾನು ಮಾತನಾಡಬೇಕು. ಫಲಿತಾಂಶ ತರುವ ಜನರೊಡನೆ ಇರಲು ಇಷ್ಟಪಡುತ್ತೇನೆ. ಈಗ ನಾನು ವಜ್ರವನ್ನು ಕಡೆಯುತ್ತಿದ್ದೇನೆ. ಈ ವಜ್ರ ಕಡೆಯುವ ಆಯುಧವನ್ನು ಕಲ್ಲುಗಳನ್ನು ಕತ್ತರಿಸಲು ಉಪಯೋಗಿಸುವುದಿಲ್ಲ. ಈ ರೀತಿಯಲ್ಲಿ ನಾನು ಅಷ್ಟಾವಕ್ರಗೀತೆಯನ್ನು ಆರಿಸಿಕೊಂಡಿದ್ದೇನೆ. ನೀವು ತಯಾರಾಗಿ ಇರುವುದರಿಂದ ಆಯ್ದುಕೊಂಡಿದ್ದೇನೆ.

ಏನನ್ನೂ ಮಾಡಬೇಡಿ ಎಂದು ಅಷ್ಟಾವಕ್ರನು ತಿಳಿಸುತ್ತಾನೆ. ಎಲ್ಲಾ ಕ್ರಿಯೆಗಳನ್ನು ಅವನೊಬ್ಬನೇ ಮಾಡುವುದು. ಏನು ಆಗುತ್ತಿದೆಯೋ, ಅದು ಆಗುತ್ತಿದೆ. ನೀವು ಅದರೊಳಗೆ ಒಂದಾಗಿ. ಇದರಿಂದ ಬಿಡುಗಡೆ ಹೊಂದುವುದು ಹೇಗೆ? ಎಂದು ಕೇಳಬೇಡಿ. ನಾನು ಎಂಬುದು ಇದ್ದರೆ, ಇರಲಿ ಬಿಡಿ, ಅದನ್ನು ಏತಕ್ಕಾಗಿ ಬಿಡುಗಡೆಗೊಳಿಸಬೇಕು? ಅದನ್ನೂ ಸ್ವೀಕರಿಸಿ. ನಾನು ಎಂಬುದು ಉಂಟಾಗುತ್ತಿದ್ದರೆ, ಆಗಲಿ ಎಂದು ಉಂಟಾಗುವಿಕೆಯ ಜೊತೆ ಇರಿ. ನೀವೇನೂ ಅದನ್ನು ಸೃಷ್ಟಿಸಿಲ್ಲ. ಹಾಗಿದ್ದ ಮೇಲೆ ನಿಮ್ಮದಲ್ಲದ್ದನ್ನೂ ಬೇಡ ಎಂದು ಅಳಿಸಲು ಹೇಗೆ ಸಾಧ್ಯ? ಏನು ಮಾಡಲು ಸಾಧ್ಯ? ಎಂದು ಕೇಳಿದರೆ ನಿಮಗೆ ಎರಡು ಕಣ್ಣುಗಳು, ಒಂದು ಮೂಗು ಹಾಗು ಅಹಂಕಾರಗಳು ಇವೆ. ಎಲ್ಲವನ್ನು ಸ್ವೀಕರಿಸಿರುವಿರಿ, ಯಾವುದೂ ನಿಮ್ಮ ಹಿಡಿತದಲ್ಲಿ ಇಲ್ಲ ಅಥವಾ ನಿಮ್ಮ ಕೈಯಲ್ಲಿ ಇಲ್ಲ.

30/04/2026

#ನಾಗಣ್ಣ ಕಿಲಾರಿ ಅವರ ಹೊಸ_ಕಾದಂಬರಿ

ಕಾಯಗುಡ್ಡ

ಮುಖಬೆಲೆ : 140/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಕಾಯಗುಡ್ಡ ಬರೀ ಕಥೆಯಲ್ಲ. ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ. ಕಾಯಗುಡ್ಡ ಕಾದಂಬರಿ ಮುಗ್ಧ ಬಾಲಕನ ಸಹಜ ನಿಸರ್ಗ ಪ್ರೀತಿ, ಶಾಲೆಯೆಂಬ ಜೈಲಿನ ಬೀದಿ ಇವುಗಳಷ್ಟೆ ಹೇಳುತ್ತಿದೆ ಅಂದುಕೊಳ್ಳುವಷ್ಟರಲ್ಲಿಯೇ ಅನಿರೀಕ್ಷಿತ ತಿರುವುಗಳು ಪಡೆಯುತ್ತಾ ಸಾಗುತ್ತದೆ. ನಂಬುವ ಜೀವಗಳು ಕಾಳ ರಾತ್ರಿಯಲ್ಲಿ, ಬಿರುಕು ಬಿಟ್ಟ ದಾರಿಯಲ್ಲಿ ತಟ್ಟನೆ ಬಿಟ್ಟು ಹೋಗುವಾಗ ಕಳ್ಳರೆಂದುಕೊಂಡವರು ಜೀವ ಉಳಿಸಿ ನೀರು ಕಾಳು ಕೊಡುವ ಕರುಣೆಯ ಮೂರ್ತಿಗಳು ಆಗುತ್ತಾರೆ. ಮನುಷ್ಯ ಹೀಗೆ ಎಂದು ಗೆರೆ ಕೊರೆದಂತೆ ಹೇಳಲಾಗದು. ಇದು ಸರಿ ಮತ್ತೆನೋ ತಪ್ಪು ಎಂದು ಹುಡುಕುವ ಪ್ರಯತ್ನ ಈ ಕಾದಂಬರಿ ಮಾಡುವುದಿಲ್ಲ. ಸಹಜ ಬದುಕಿನಂತೆ ತಣ್ಣಗೆ ಯಾವುದೋ ಕಾಡಿನ ಮಧ್ಯೆ ಹರಿಯುವ ಕಿರು ಹಳ್ಳದಂತೆ ಕಾದಂಬರಿಯ ಕಥೆ ತನ್ನ ಪಾಡಿಗೆ ತಾನು ಹರಿಯುತ್ತಾ ಸಾಗುತ್ತದೆ. ಒಟ್ಟಾರೆ ಕಾದಂಬರಿಯ ಯಶಸ್ಸು ಕೂಡ ಇದೆ ಅನಿಸುತ್ತದೆ.

ಕುರಿ-ಆಡು, ದನಕರುಗಳು, ಗುಡ್ಡದಲ್ಲಿ ದೊರೆಯುವ ಬಗೆ ಬಗೆಯ ಹಣ್ಣುಗಳು, ತಾತನ ಹಿಂದೆ ಓಡಾಡುವ ಖುಷಿ, ಇವೆಲ್ಲದರಾಚೆ ಇಷ್ಟವಿಲ್ಲದ ಶಾಲೆ, ಇವುಗಳ ಮಧ್ಯೆ ದಿನಗಳು ನೂಕುವ ಮುಗ್ಧ ಹುಡುಗನೊಬ್ಬನಿಗೆ ಭಯ ಬೀಳಿಸುವಂತೆ ಕಾಣುವ ತಂದೆ ಮತ್ತು ವಿವರಿಸಲಾಗದ ತಾಯಿಯ ವಿಚಿತ್ರ ಪ್ರೀತಿ ಇವುಗಳ ಮಧ್ಯೆ ಸಿಲುಕಿದ ಹುಡುಗನೊಬ್ಬನ ಕಥೆ.

ಕಪಿಲ ಪಿ. ಹುಮನಾಬಾದೆ

 #ಹೊಸ_ಪುಸ್ತಕಕ್ಯಾಸ್ಟ್ ಪಾಲಿಟಿಕ್ಸ್ಲೇಖಕರು    : ಡಾ. ಸಿ.ಜಿ. ಲಕ್ಷ್ಮೀಪತಿಮುಖಬೆಲೆ   : 250/-ರಿಯಾಯಿತಿ : 10%ಶಿಪ್ಪಿಂಗ್      : ಪ್ರತ್ಯೇಕ...
27/04/2026

#ಹೊಸ_ಪುಸ್ತಕ

ಕ್ಯಾಸ್ಟ್ ಪಾಲಿಟಿಕ್ಸ್

ಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ
ಮುಖಬೆಲೆ : 250/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಡಾ. ಸಿ.ಜೆ. ಲಕ್ಷ್ಮೀಪತಿ ಜಾತಿ ಸಂಬಂಧಿತ ವಿಷಯಗಳನ್ನು ತೀಕ್ಷ್ಣ ಮತ್ತು ಯಾವುದೇ ರಾಜೀ ಇಲ್ಲದೆ ಯೋಜಿಸುವ ಈ ಕಾಲಮಾನದ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಚಿಂತಕರಾಗಿದ್ದಾರೆ. ಜಾತಿ ರೂಪಿಸುವ ಸಾಮಾಜಿಕ-ಆರ್ಥಿಕ ವಾಸ್ತವಗಳ ಬಗ್ಗೆ ಅವರಿಗೆ ಆಳವಾದ ಸಂವೇದನೆ ಇದೆ. ಅಸಮಾನತೆಯ ದರ್ಶನವಷ್ಟೇ ಅಲ್ಲ, ಜಾತಿಯನ್ನು ಪುನರುತ್ಪಾದಿಸುವ ಭಾಷೆಯ ಮೇಲೆಯೂ ಅವರು ವಿಶೇಷ ಗಮನ ಹರಿಸುತ್ತಾರೆ. ತನ್ನ ಸ್ವಭಾವದಲ್ಲೇ ಮೇಲರಿಮೆ, ಪುರುಷ ಪ್ರಧಾನತೆ, ಮತ್ತು ಮೂಢನಂಬಿಕೆಗಳ ಲಕ್ಷಣಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಡಾ. ಸಿ.ಜೆ. ಲಕ್ಷ್ಮೀಪತಿ, ತಮ್ಮದೇ ಸಮುದಾಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಲು ಹಿಂಜರಿಯುವುದಿಲ್ಲ. ಈ ರೀತಿಯ ವಿಮರ್ಶಾತ್ಮಕ ಕೆಲಸದಲ್ಲಿ ಯಾವುದೇ ರಾಜೀ ಸಂಧಾನವಿಲ್ಲದೆ ತೊಡಗಿಸಿಕೊಂಡಿರುವ ಡಾ. ಲಕ್ಷ್ಮೀಪತಿಯವರಿಗೆ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನೇ ಸೃಷ್ಟಿಸಿದೆ. ಆದರೆ ಅವರ ಪ್ರಭಾವವು ಮೌನವಾಗಿ ಆದರೆ ಅರ್ಥಪೂರ್ಣವಾಗಿ ಅವರ ಸುತ್ತಲವರ ಮೇಲೆ ಬೀರುತ್ತಿದೆ. ‘ಕ್ಯಾಸ್ಟ್ ಪಾಲಿಟಿಕ್ಸ್’ ಅವರ ಕೃತಿಶ್ರೇಣಿಯ ಮುಂದುವರಿದ ಭಾಗ. ಸಾಮಾನ್ಯ ಕಣ್ಣುಗಳಿಗೆ ಗೋಚರಿಸದ ಸಮಾಜದ ಹುಣ್ಣುಗಳು ಲಕ್ಷ್ಮೀಪತಿಯವರಂಥ ಸೂಕ್ಷ್ಮಗ್ರಾಹಿ ಸಮಾಜಶಾಸ್ತ್ರಜ್ಞರ ಕಣ್ಣಿಗೆ ಮಾತ್ರ ಬೀಳಲು ಸಾಧ್ಯ. ಸಾಮಾಜಿಕ ವೈಕಲ್ಯದ ಡಯಾಗ್ನೋಸಿಸ್ನಲ್ಲಿ ತೊಡಗಿಕೊಂಡು ಅದನ್ನು ಬರಹ ರೂಪದಲ್ಲಿ ನಮ್ಮ ಮುಂದಿಡುತ್ತಿರುವುದು ನಮ್ಮ ಪುಣ್ಯಗಳೇ ನಾವು ಎಂದು ಕಂಡುಕೊಳ್ಳಬೇಕಿದೆ.

-ಡಾ. ರೀಟಾ ರೀನಿ ಸಂಪಾದಕರು, ಮಾತುಕತೆ ಮಾಸಿಕ

 #ಬರಗೂರು ರಾಮಚಂದ್ರಪ್ಪ ಅವರ ಹೊಸ ಪುಸ್ತಕಶ್ರೇಷ್ಠತೆಯ ಸೊಕ್ಕು (ಚಿಂತನ ಸಂಕಲನ)ಮುಖಬೆಲೆ   : 550/-ರಿಯಾಯಿತಿ : 10%ಶಿಪ್ಪಿಂಗ್      : ಉಚಿತಸಂ...
26/04/2026

#ಬರಗೂರು ರಾಮಚಂದ್ರಪ್ಪ ಅವರ ಹೊಸ ಪುಸ್ತಕ

ಶ್ರೇಷ್ಠತೆಯ ಸೊಕ್ಕು
(ಚಿಂತನ ಸಂಕಲನ)

ಮುಖಬೆಲೆ : 550/-
ರಿಯಾಯಿತಿ : 10%
ಶಿಪ್ಪಿಂಗ್ : ಉಚಿತ
ಸಂಪರ್ಕಿಸಿ : 099806 33644

'ಶ್ರೇಷ್ಠತೆಯ ಸೊಕ್ಕು' ಎಂಬ ನನ್ನ ಈ ಕೃತಿಯು ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಲೇಖನಗಳ ಸಂಕಲನ. ಇದೇ ಹೆಸರಿನ ಲೇಖನವೇ ಈ ಸಂಕಲನದಲ್ಲಿ ಮೊದಲನೆಯದು. ಶ್ರೇಷ್ಠತೆ ಎನ್ನುವುದು ಆದರ್ಶದ ಗುರಿಯತ್ತ ಸಾಗುವ ನಿರಂತರ ಶೋಧವೆಂದು ನಾನು ನಂಬಿದ್ದೇನೆ. ಹಾಗೆ ನೋಡಿದರೆ 'ಶ್ರೇಷ್ಠತೆ' ಎಂಬ ಹಂತವನ್ನು ನಿರ್ಧರಿಸುವ ಸಾಹಿತ್ಯಕ, ಸಾಂಸ್ಕೃತಿಕ ಮಾನದಂಡಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ. ವಾಸ್ತವ ಹೀಗಿರುವಾಗ, ಶ್ರೇಷ್ಠತೆಯ ಹೆಸರಿನಲ್ಲಿ ಪ್ರತಿಭಾ ಭ್ರೂಣ ಹತ್ಯೆ ಮಾಡಬಾರದು. ಬರೆದರೆ ಶ್ರೇಷ್ಠವಾದದ್ದನ್ನೇ ಬರೆಯಬೇಕು ಎಂದು ಫರ್ಮಾನು ಹೊರಡಿಸುವುದು ಮತ್ತು ಅಂತಹ ಅಭಿಪ್ರಾಯದ ಒತ್ತಡವನ್ನು ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಮನೋಧರ್ಮದ ಮಾನದಂಡಗಳೇ ಅಂತಿಮವೆಂದೂ ಉಳಿದದ್ದೆಲ್ಲ ಕನಿಷ್ಠವೆಂದೂ ಬೀಗುವುದು ಒಂದು 'ಸೊಕ್ಕು' ಎಂದು ನನ್ನ ಅನಿಸಿಕೆ. ಸೃಜನಶೀಲತೆಯು ಯಾವತ್ತೂ ಸೊಕ್ಕಾಗಬಾರದು. ಸೃಜನಶೀಲತೆಯನ್ನು ನಿರ್ಧರಿಸುವ ಮಾನದಂಡಗಳೂ ಅಹಮ್ಮಿಕೆಯ ಸೊಕ್ಕಿನಿಂದ ಕೂಡಿರಬಾರದು. ವಿಶೇಷವಾಗಿ ನಮ್ಮ ಶ್ರೇಣೀಕೃತ ಸಮಾಜದಲ್ಲಿ ಅಸಂಖ್ಯಾತರ ಅಕ್ಷರಾಭಿವ್ಯಕ್ತಿಯೇ ಅಸಾಧ್ಯವಾಗಿದ್ದ ಇತಿಹಾಸವಿತ್ತೆಂಬುದನ್ನು ಮರೆಯಬಾರದು. ಅಕ್ಷರ ವಂಚಿತ ಸಮುದಾಯಗಳಿಗೆ ಬರೆಯುವುದೇ ಒಂದು ಬಂಡಾಯ. ನಮ್ಮ ಸನ್ನಿವೇಶದಲ್ಲಿ 'ಶ್ರೇಷ್ಠತೆ'ಯ ಪರಿಕಲ್ಪನೆಗೆ ಸಾಂಸ್ಕೃತಿಕ ಆಯಾಮವಷ್ಟೇ ಅಲ್ಲದೆ, ಸಾಮಾಜಿಕ ಆಯಾಮವೂ ಇರುತ್ತದೆಯೆಂಬುದು ನನ್ನ ತಿಳುವಳಿಕೆ.

ರಹಮತ್ ತರೀಕೆರೆ ಅವರ ಆತ್ಮಕತೆ "ಕುಲುಮೆ" ಕುರಿತು Deepa Hiregutti ಅವರ ಆಪ್ತವಾದ ಬರಹ ಈ ಪುಸ್ತಕ ಬುಕ್ ಸರ್ಕಲ್‌ನಲ್ಲಿ ಲಭ್ಯವಿದೆಮುಖಬೆಲೆ   :...
25/04/2026

ರಹಮತ್ ತರೀಕೆರೆ ಅವರ ಆತ್ಮಕತೆ "ಕುಲುಮೆ" ಕುರಿತು Deepa Hiregutti ಅವರ ಆಪ್ತವಾದ ಬರಹ

ಈ ಪುಸ್ತಕ ಬುಕ್ ಸರ್ಕಲ್‌ನಲ್ಲಿ ಲಭ್ಯವಿದೆ
ಮುಖಬೆಲೆ : 360/-
ರಿಯಾಯಿತಿ : 10%
ಶಿಪ್ಪಿಂಗ್ : 40/-
ಸಂಪರ್ಕಿಸಿ : 099806 33644

ʼಕುಲುಮೆʼ ರಹಮತ್‌ ತರೀಕೆರೆ ಅವರ ಈ ಪುಸ್ತಕ ತಂದು ಬಹಳ ದಿನಗಳಾದರೂ ಓದಲು ಆಗಿರಲಿಲ್ಲ ಕಾರಣ ಅದನ್ನು ಸುಧೀರ್‌ ತೆಗೆದುಕೊಂಡು ಹೋಗಿ ಅವರ ಆಫೀಸಿನಲ್ಲಿ ಇಟ್ಟುಕೊಂಡಿದ್ದರು.(ಬಹಳಷ್ಟು ಪುಸ್ತಕಗಳನ್ನು ನಾನು ಓದಲು ತಡವಾಗುವುದಕ್ಕೆ ಎರಡನೆಯ ಕಾರಣ ಇದೇ. ಮೊದಲನೆಯದ್ದು ಸೋಮಾರಿತನ)
ಅಂತೂ ಕಳೆದ ವಾರ ಓದಲು ಶುರು ಮಾಡಿದ್ದಷ್ಟೇ. ಆದರೆ ಒಂದು ಕಡೆ ಹಿಡಿದು ಕೂತು ಓದಲು ಆಗಲಿಲ್ಲ. ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ರೈಲಿನಲ್ಲಿ ಎರ್ನಾಕುಲಮ್‌ಗೆ ಹೋಗುವುದಿತ್ತು. ಬೇರೆ ಯಾವ ಪುಸ್ತಕವನ್ನೂ ತೆಗೆದುಕೊಂಡು ಹೋಗದೇ ಕೇವಲ ʼಕುಲುಮೆʼಯನ್ನು ಮಾತ್ರ ಹಿಡಿದುಕೊಂಡು ಹೋದೆ. ಸುತ್ತಲಿನ ಜಗತ್ತು ಮೊಬೈಲು ರೀಲ್ಸ್‌ನಲ್ಲಿ ಮುಳುಗಿ ಹೋಗಿದ್ದರೆ ನಾನು ಮತ್ತು ಸುಧೀರ್‌ ಮಾತ್ರ ಪುಸ್ತಕ ಹಿಡಿದುಕೊಂಡಿದ್ದೆವು. (ಹಾಗಂತ ನಾವಿಬ್ರೇ ಪುಸ್ತಕ ಹಿಡಿದದ್ದು ಅಂತ ಬಿಲ್ಡ್‌ ಅಪ್‌ ಕೊಡ್ತಾ ಇಲ್ಲ, ಹೆಚ್ಚು ಹೊತ್ತು ನಾವೂ ಮೊಬೈಲೊಳಗೇ ಇದ್ದೆವು ಬಿಡಿ) ಕೆಲವರು ರೈಲಿನಲ್ಲಿ ಕೊಟ್ಟ ಪತ್ರಿಕೆ ತಿರುವಿ ಹಾಕಿ ಬದಿಗಿಟ್ಟಿದ್ದರು. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಮೊಬೈಲ್‌ನಲ್ಲಿ ತಮ್ಮನ್ನು ತಾವೇ ಮರೆತಿದ್ದರು! ಇಡೀ ಜಗತ್ತೇ ಅಂಗೈ ಅಗಲದ ಈ ಸಾಧನಕ್ಕೆ ಮರುಳಾಗಿಬಿಟ್ಟಿರುವ ಪರಿಗೆ ಗಾಬರಿಯಾಗುತ್ತ ಪುಸ್ತಕ ಓದಲಾರಂಭಿಸಿದೆ.
ರಹಮತ್‌ ತರೀಕೆರೆಯವರ ಬಹುತೇಕ ಎಲ್ಲ ಪುಸ್ತಕಗಳೂ ನಮ್ಮ ಮನೆಯಲ್ಲಿ ಇವೆ. ಅವರ ಬರಹಗಳ ಮತ್ತು ಅವರ ವ್ಯಕ್ತಿತ್ವದ ಅಭಿಮಾನಿ ನಾನು. ಆಗಾಗ ಆ ಪುಸ್ತಕಗಳನ್ನು ತಿರುವಿ ಹಾಕುವಾಗ ಗೊತ್ತಾಗುವುದೇನೆಂದರೆ ಅವರು ಅಧ್ಯಯನಶೀಲರು. ಜತೆಗೆ ದ್ವೀಪವಾಗಿರಲು ಎಂದಿಗೂ ಇಷ್ಟಪಟ್ಟವರಲ್ಲ. ಜನರ ಬದುಕು, ಭಾಷೆ, ಸಂಸ್ಕೃತಿ, ಆಹಾರ ಇವೆಲ್ಲವುಗಳ ಬಗ್ಗೆ ಅವರದ್ದು ಕುತೂಹಲದ ಮನಸ್ಸು. ಅಷ್ಟೇ ಅಲ್ಲ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಜಾಣಕುರುಡು ತೋರುವವರಲ್ಲ. ಸಮಸ್ಯೆ ಯಾವುದೇ ಇರಲಿ ಅವರ ಲೇಖನಿ ಬರೆದೇ ಸಿದ್ಧ. ಮತ್ತು ಇವೆಲ್ಲವುಗಳನ್ನು ಅದನ್ನು ಜಗತ್ತಿಗೆ ಅವರು ತಿಳಿಸುವ ರೀತಿಯೂ ಅನನ್ಯ. ಅಂತೆಯೇ ತಮ್ಮ ಆತ್ಮಕಥೆಯನ್ನು ಅವರು ಅರ್ಪಿಸಿರುವುದು ಕೂಡ ತಾವು ಹುಟ್ಟಿದ ಬೆಳೆದ ಬದುಕಿರುವ ಊರುಗಳಿಗೆ. ಕಾರಣ ಊರೆಂದರೆ ಜನರು , ಜನರೆಂದರೆ ತರೀಕೆರೆಯವರಿಗೆ ಅಂಟಿನ ನಂಟು. ಹಾಗಾಗಿ ಈ ಆತ್ಮಕಥೆ ಜನರ ಕಥೆಯೂ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ಸುಮಾರು ಮುನ್ನೂರು ಪುಟದ ಈ ಪುಸ್ತಕದ ಪ್ರತೀ ಪುಟದಲ್ಲೂ ಯಾರದಾದರೂ ಕಥೆಯಿದೆ. ಅಷ್ಟರ ಮಟ್ಟಿಗೆ ರಹಮತ್‌ ತರೀಕೆರೆಯವರು ತಮ್ಮ ಆತ್ಮಕಥೆಯನ್ನು ಅನೇಕ ಜನಸಾಮಾನ್ಯರ ಜೀವನ ಚರಿತ್ರೆಯನ್ನಾಗಿಸಿದ್ದಾರೆ. ಆತ್ಮಕಥೆಗಳಲ್ಲಿ ಮುಖ್ಯವಾಗಿ ಕಾಣುವ ಫರ್ಸ್ಟ್‌ ಪರ್ಸನ್‌ ಸಿಂಗ್ಯುಲರ್‌ (ನಾನು)ಇಲ್ಲಿ ಅಳುಕುತ್ತ ಅಳುಕುತ್ತ ಬರುತ್ತದೆ. ಇಡೀ ಪುಸ್ತಕವನ್ನು ತುಂಬಿರುವುದು ಥರ್ಡ್‌ ಪರ್ಸನ್‌ ಸಿಂಗ್ಯುಲರ್‌ ಪ್ಲೂರಲ್ಲೇ(ಅವನು, ಅವಳು, ಇವಳು ಇವನು ಅವರು ಇವರು )! ಈ ಪುಸ್ತಕದ ಮುಖಪುಟವೂ ಕೂಡ ಲೇಖಕರ ಆಶಯಕ್ಕೆ ಪೂರಕವಾಗಿಯೇ ಇದೆ. ರಸ್ತೆಯ ನಡುವಿನ ಯಾವುದೋ ಪುಟ್ಟ ಅಂಗಡಿಯಲ್ಲಿ ಯಾರ ಜತೆಯೋ ಚಾ ಕುಡಿಯುತ್ತಿರುವ ಈ ಪಟವೇ ಸುಮಾರು ಮಾತಾಡುತ್ತದೆ.
ಆರಂಭದಲ್ಲಿ ಗರಿಕೆಬಳ್ಳಿ ಓದುತ್ತಿದ್ದಂತೆಯೇ ಪಾರ್ವತಕ್ಕನ ಕುರಿತು ತಣ್ಣಗಾದ ಮನಸ್ಸು ಬಣವೆಯಲ್ಲಿ ಸುಟ್ಟು ಸತ್ತುಹೋದ ಬಾಲೆಯ ಬಗ್ಗೆ ಓದಿ ಉರಿಯತೊಡಗುತ್ತದೆ. ಮಲ್ಲಿಗಿ ಮೊಗ್ಗಿನಂತಹ ಮಂಡಕ್ಕಿ ಮಾಡುವವರು, ಭಟ್ಟಿಯ ಬೆಂಕಿ ಹೊಗೆ ಧೂಳುಗಳಲ್ಲಿ ಒಣಗಿ ಅಕಾಲ ಮರಣಕ್ಕೆ ಒಳಗಾಗುವುದನ್ನು ಓದಿದಾಗ ಹೊಟ್ಟೆ ಪಾಡಿಗಾಗಿ ಬೆಂಕಿ ಹೊಗೆಯಲ್ಲಿ ಬೇಯುವ ಶ್ರಮಜೀವಿಗಳು ಕಣ್ಮುಂದೆ ಹಾದು ಹೋಗುತ್ತಾರೆ. ಹಸಿ ಕಟ್ಟಿಗೆಯ ಒಲೆ ಮುಂದೆ ಕಣ್ಣೊರೆಸಿಕೊಳ್ಳುತ್ತಾ ಕುಳಿತು ಮೂರು ಹೊತ್ತೂ ಮನೆಮಂದಿಗೆಲ್ಲ ಬೇಯಿಸಿ ಹಾಕುತ್ತಿದ್ದ ನಮ್ಮ ಅಜ್ಜಿಯರ ಕಾಲದ ತಾಯಂದಿರು ನೆನಪಾಗುತ್ತಾರೆ. ಹೀಗೆ ಜನರ ಕಥೆ ಹೇಳುತ್ತಲೇ ಇವರ ಬದುಕು ಬಿಚ್ಚಿಕೊಳ್ಳುತ್ತ ಹೋಗುತ್ತದೆ.
ತಂದೆತಾಯಿಯ ಸಾವನ್ನು ಕುರಿತು ಹೇಳುವಾಗ ಅಪ್ಪ ಎಂದಿಗೂ ಮಕ್ಕಳೊಂದಿಗೆ ತಮ್ಮ ಹಳೆಯ ನೋವುಗಳನ್ನು ಹಂಚಿಕೊಳ್ಳಲಿಲ್ಲ, ಅಪ್ಪ ಅಮ್ಮನ ಸಂಬಂಧದ ರೀತಿ ಅರ್ಥ ಮಾಡಿಕೊಳ್ಳುವ ವೇಳೆಗೆ ಅವರೇ ಇಲ್ಲವಾದರು ಎನ್ನುತ್ತಾರೆ. ಮರುಕ್ಷಣ ಅನಾಮಿಕರ ಜೀವನಗಾಥೆಗಳು ಸಾವಿನೊಂದಿಗೆ ದಫನ್‌ ಆಗುವುದು ಲೋಕಜೀವನದ ಸಹಜ ವಿನ್ಯಾಸವೇ ಆಗಿದೆ ಎಂಬ ಕಟುಸತ್ಯವನ್ನೂ ರಹಮತ್‌ ಸರ್‌ ಬರೆಯುತ್ತಾರೆ. ಆದರೂ ಇಂತಹ ಹೇಳದ ಕಥೆಗಳೇ ಜನಪದ ಕತೆಗಳಾಗಿ ಮರುಹುಟ್ಟು ಪಡೆಯುತ್ತವೆ ಎಂದು ಆಶಾವಾದ ವ್ಯಕ್ತಪಡಿಸುತ್ತಾರೆ.
ಇಡೀ ಪುಸ್ತಕದ ತುಂಬ ಆಸಕ್ತಿ ಹುಟ್ಟಿಸುವ ಈ ಬಗೆಯ ಬಿಡಿಚಿತ್ರಗಳನ್ನು ಓದಿಯೇ ಅನುಭವಿಸಬೇಕು. ಅದೆಷ್ಟು ಬಗೆಯ ಜನರು ಅದೆಷ್ಟು ಬಗೆಯ ಸ್ವಭಾವಗಳು! ಅವೆಲ್ಲವನ್ನೂ ಸೂಕ್ತವಾದ ಶಬ್ದಗಳಲ್ಲಿ ವಿವರಿಸಿರುವ ರೀತಿ! ಕುಲುಮೆಯಲ್ಲಿ ಕಾದ ಕಬ್ಬಿಣ ಕಮ್ಮಾರನ ಇಚ್ಛೆಗೆ ತಕ್ಕಂತೆ ಆಕಾರ ಪಡೆದುಕೊಳ್ಳುವಂತೆ ಕನ್ನಡ ರಹಮತ್‌ ಸರ್ ಕೈಯ್ಯಲ್ಲಿ ಅರಳುವ ಪರಿ ಓದುಗರಿಗೆ ಮಾತ್ರ ಗೊತ್ತಾಗುತ್ತದೆ!
ನಂದನವನದಲ್ಲಿದ್ದರೂ ಬರಗಾಲಪೀಡಿತರಂತೆ ಗೋಳಾಡುವುದು ಕೆಲವರ ಕರ್ಮ. ಅದಕ್ಕೆ ವಿರುದ್ಧವಾಗಿ ಎಂಥ ಪರಿಸ್ಥಿತಿಯಲ್ಲಿದ್ದರೂ ಅಲ್ಲಿ ಸಮೃದ್ಧತೆಯನ್ನು ಸೃಷ್ಟಿಸಿಕೊಳ್ಳುವುದು ತರೀಕೆರೆ ಸರ್‌ ಅಂತಹವರ ಶಕ್ತಿ. ಅದು ಜನರಿರಬಹುದು, ಹಿತ್ತಲಲ್ಲಿ ಬೆಳೆವ ತರಕಾರಿಗಳೇ ಆಗಿರಬಹುದು. ಮನೆಯೊಳಗೆ ಗೂಡು ಕಟ್ಟುವ ಜೇನನ್ನು ಸ್ವಾಗತಿಸಿ ಕಣಜವನ್ನು ವಿಲನ್‌ ಅಂತೆ ನೋಡುವ ರಹಮತ್‌ ಸರ್‌ ಸಾಧಾರಣ ಮನುಷ್ಯರೇ .ಆದರೆ ಅದನ್ನು ಮುಚ್ಚಿಡದೇ ಹೇಳಿಕೊಳ್ಳುವಲ್ಲಿ ಅವರ ವ್ಯಕ್ತಿತ್ವ ವಿಶಿಷ್ಟವಾಗುತ್ತದೆ.
ಹೀಗೆ ಬೇರೆ ಬೇರೆ ಸಂಗತಿಗಳ ಬಗ್ಗೆ ಬರೆಯುತ್ತಲೇ ತಾವೂ ಓದುಗರಿಗೆ ಪರಿಚಿತರಾಗುತ್ತಾ ಹೋಗುತ್ತಾರೆ. ತಂದೆಯ ಬಗ್ಗೆ ಬರೆದ ರೀತಿ ಬಲು ವಿಶಿಷ್ಠ. ತಮ್ಮ ಕಲೀಮುಲ್ಲಾ ಬಗ್ಗೆ ಬರೆದ ಅಧ್ಯಾಯವೂ ಅಪರೂಪದ್ದು. ಇವೆರಡೂ ನನಗೆ ಬಹಳ ಇಷ್ಟವಾದ ಭಾಗಗಳು. ವ್ಯಕ್ತಿಚಿತ್ರವನ್ನು ಹೀಗೂ ಬರೆಯಬಹುದು ಎನ್ನುವುದಕ್ಕೆ ಮಾದರಿಯಾದವು. . ಗಂಡ ಹೆಂಡತಿಯ ಸಂಬಂಧವೆನ್ನುವುದು ಹೇಗೆ ʼಕತ್ತಿಯಂಚಿನ ದಾರಿʼ ಎಂಬುದನ್ನು ಪ್ರಾಮಾಣಿಕತೆಯಿಂದ ನಿರೂಪಿಸುತ್ತ ಆ ಹಾದಿಯಲ್ಲಿ ಯಶಸ್ವಿಯಾಗಿ ಕೈಕೈ ಹಿಡಿದುಕೊಂಡು ನಡೆದದ್ದನ್ನೂ ಹೇಳುವ ಬಗೆ ನಿಜಕ್ಕೂ ವಿಶಿಷ್ಟವಾಗಿದೆ. ಇವರನ್ನು ಮನೆಯಲ್ಲಿ ಉಳಿಸಿಕೊಳ್ಳುವ ಆಪ್ತ ಗೆಳೆಯ ಒಬ್ಬನು ಇವರ ಸಮುದಾಯದ ಒಬ್ಬ ಗೆದ್ದ ಅಭ್ಯರ್ಥಿಯ ಬಗ್ಗೆ ತುಚ್ಛ ಪದ ಬಳಸಿದ್ದನ್ನು ಹೇಳುತ್ತ ಅವನ ಸಂಪರ್ಕ ಕಡೆದುಕೊಂಡ ಸ್ವಾಭಿಮಾನಿ ಹುಡುಗನೊಳಗೆ ಅವಿತಿರುವ ಸಂಕಟ ನಮ್ಮನ್ನು ಕಾಡುತ್ತದೆ. ಒಂದು ಧರ್ಮದ ಬಗ್ಗೆ ಮತ್ತೊಂದು ಧರ್ಮದವರಿಗೆ ಇರಬಹುದಾದ ಪೂರ್ವಗ್ರಹಗಳು ಮತ್ತೊಬ್ಬರ ಮೇಲೆ ಮಾಡುವ ಪರಿಣಾಮಗಳು ನಿಜಕ್ಕೂ ದುಃಖಕರ. ನಾನಂತೂ ಉಪನ್ಯಾಸಕಿಯಾಗಿ ಈ ರೀತಿಯ ಭಾವನೆಗಳಿಂದ ಮಕ್ಕಳನ್ನು ಹೊರತರುವುದು ನನ್ನ ಕರ್ತವ್ಯವೆಂದೇ ತಿಳಿದಿದ್ದೇನೆ. ಯಾವ ಧರ್ಮದವರೇ ಇರಲಿ ಇತರ ಧರ್ಮದ ಬಗ್ಗೆ ದ್ವೇಷ ಹುಟ್ಟಿಸುವಂತಹ ಮಾತಾಡುವವರ ಕೈಗೊಂಬೆಗಳಾಗಬೇಡಿ ಎಂಬ ಮಾತನ್ನು ಹೇಳುತ್ತಲೇ ಇರುತ್ತೇನೆ.
ಬರೆಯುತ್ತ ಹೋದರೆ ಬರೆಯಲು ಸುಮಾರು ಸಂಗತಿಗಳಿವೆ. ಈಗಾಗಲೇ ಬರಹ ಉದ್ದವಾಗಿದೆ. ಪುಸ್ತಕ ತಪ್ಪದೇ ಓದಿ.
ಬದುಕಿನ ಕುಲುಮೆಯಲ್ಲಿ ಕಾದ ಗಟ್ಟಿ ಕಬ್ಬಿಣದಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡ ರಹಮತ್‌ ಸರ್‌ಗೆ ಪ್ರೀತಿಯ ಧನ್ಯವಾದಗಳು.
ಫೋಟೋ: ಈ ಪೋಸ್ಟ್‌ ಜತೆಗೆ ಹಾಕಬೇಕೆಂದೇ ರೈಲಿನಲ್ಲಿ ಪುಸ್ತಕ ಹಿಡಿದು ಮಗಳ ಹತ್ತಿರ ತೆಗೆಸಿಕೊಂಡದ್ದು!

ಡಾ. ರಾಜ್‌ಕುಮಾರ್ ಹುಟ್ಟು ಹಬ್ಬದಂದು ಓದಲೇಬೇಕಾದ ಮಹತ್ವದ ಪುಸ್ತಕಬಡವರ ರಾಜಕುಮಾರಲೇಖಕರು      : ಡಾ. ಮಂಜುನಾಥ್ ಅದ್ದೆಮುಖಬೆಲೆ     : 400/-ವ...
24/04/2026

ಡಾ. ರಾಜ್‌ಕುಮಾರ್ ಹುಟ್ಟು ಹಬ್ಬದಂದು ಓದಲೇಬೇಕಾದ ಮಹತ್ವದ ಪುಸ್ತಕ

ಬಡವರ ರಾಜಕುಮಾರ

ಲೇಖಕರು : ಡಾ. ಮಂಜುನಾಥ್ ಅದ್ದೆ
ಮುಖಬೆಲೆ : 400/-
ವಿಶೇಷ ರಿಯಾಯಿತಿ : 15%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಮಾನವೀಯತೆಯ ಹಾದಿಯ ಪಯಣಿಗ

ಮಂಜುನಾಥ ಅದ್ದೆ ನಮ್ಮ ನಡುವಣ ಸಾಮಾಜಿಕ ನ್ಯಾಯದ ಪ್ರತಿನಿಧಿ.

ಸಾಂಸ್ಕೃತಿಕ ಎಚ್ಚರದ ಗುರುತು. ಶ್ರದ್ದೆ ಮತ್ತು ಸಾಹಸಗಳ ಸಂಗಾತಿ. ಸಂಕಟದ ಕಾಲದಲ್ಲಿ ನೆನಪಾಗುವ ಆಸರೆ, ದಿಕ್ಕುಗಾಣದ ಯುವ ಮನಸ್ಸುಗಳ ಭರವಸೆ.

ಮಣ್ಣಿನ ನಂಟು ಬಿಡದ ರೈತ. ಲೋಕದ ಡೊಂಕನ್ನು ತಿದ್ದುವ ಹಠವಾದಿ. ಮಾನವೀಯತೆಯ ಹಾದಿಯ ಪಯಣಿಗ.

ಎದೆಯ ದನಿಯಂತೆ ನಡೆವ ಅದ್ದೆ ಒಳಿತಿನ ರಾಯಭಾರಿ. ಅದ್ದೆಯ ಬದುಕಿಗೆ ಎಂದೂ ಬತ್ತದ ತಲಪರಿಗೆಯೇ ರೂಪಕ.

ಇಪ್ಪತ್ತನೆಯ ಶತಮಾನದ ಕನ್ನಡ ಸಮಾಜ ರೂಪಿಸಿಕೊಂಡು ಆರಾಧಿಸಿದ ಸಾಂಸ್ಕೃತಿಕ ನಾಯಕ ರಾಜಕುಮಾ‌ರ್ ಅವರನ್ನು ಕುರಿತು ಆಳವಾದ ಅಧ್ಯಯನ ಮಾಡಿ ಡಿ.ಲಿಟ್. ಪದವಿ ಗಳಿಸಿ ಸಂಶೋಧಕರಿಗೆ ಅಚ್ಚರಿಯನ್ನು ಹುಟ್ಟಿಸಿದವನು. ಸಂವಿಧಾನದ ಆಶಯಗಳ ಸಮರ್ಥಕನಾದ ಅದ್ದೆಯ ನಡೆ ನುಡಿಗಳು ಮುಂದಿನ ತಲೆಮಾರುಗಳಿಗೆ ಮಾದರಿ ಎನ್ನುವ ಅಚಲ ನಂಬಿಕೆ ನನ್ನದು.

ಕೆ. ವೈ. ನಾರಾಯಣಸ್ವಾಮಿ

Address

2nd Block Jayanagar
Bangalore
560011

Alerts

Be the first to know and let us send you an email when Book Circle posts news and promotions. Your email address will not be used for any other purpose, and you can unsubscribe at any time.

Share

Category