Acharya Book Store

Acharya Book Store mantra books, sarva mantra sangraha, vedic books, Acharya book store, Acharya srinivas

ಎಲ್ಲರಿಗೂ ಆದರದ ಸುಸ್ವಾಗತ
29/07/2024

ಎಲ್ಲರಿಗೂ ಆದರದ ಸುಸ್ವಾಗತ

ದಯವಿಟ್ಟು ಪೂರ್ಣವಾಗಿ ಓದಿಃಆಚಾರ್ಯ ಶ್ರೀನಿವಾಸ ಆದ ನಾನು ವಿಶ್ವದಲ್ಲೇ ಮೊಟ್ಟ ಮೊದಲ ಭಾರಿಗೆ ಹಿಂದು ಧರ್ಮದ ಕ್ಯಾಲೆಂಡರ್ ಅನ್ನು ಮಾದಿದ್ದೇನೆ. ಇದ...
31/03/2024

ದಯವಿಟ್ಟು ಪೂರ್ಣವಾಗಿ ಓದಿಃ
ಆಚಾರ್ಯ ಶ್ರೀನಿವಾಸ ಆದ ನಾನು ವಿಶ್ವದಲ್ಲೇ ಮೊಟ್ಟ ಮೊದಲ ಭಾರಿಗೆ ಹಿಂದು ಧರ್ಮದ ಕ್ಯಾಲೆಂಡರ್ ಅನ್ನು ಮಾದಿದ್ದೇನೆ. ಇದರ ವಿಶೇಷತೆಃ-
1. ಹಿಂದು ಧರ್ಮದ ಪದ್ದತಿಯಂತೆ ಹೊಸವರ್ಷವಾದ ಯುಗಾದಿಯಿಂದ ಯುಗಾದಿಯವರೆಗು ಈ ಕ್ಯಾಲೆಂಡರ್ ಇರುತ್ತದೆ. (ದಿನಾಂಕ ೦೯-೦೪-೨೦೨೪ ಯುಗಾದಿಯಿಂದ ಈ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ)
2. ಹಿಂದು ಧರ್ಮದ ಹಾಗೆ ಚೈತ್ರ, ವೈಶಾಖ, ಜ್ಯೇಷ್ಠ............... ಈ ರೀತಿಯ ತಿಂಗಳುಗಳು ಇರುತ್ತದೆ.
3. ಹಬ್ಬಗಳ ನಿಖರವಾದ ದಿನಾಂಕವನ್ನು ಸೂಚಿಸಿದ್ದೇನೆ.
4. ನೀವು ಯಾವ ಕ್ಯಾಲೆಂಡರ್ ನಲ್ಲು ನೋಡಲಾಗದ ತಿಥಿ, ನಕ್ಚತ್ರಗಳ ಪ್ರಾರಂಬ ಮತ್ತು ಮುಕ್ತಾಯದ ಸಮಯವನ್ನು ಸೂಚಿಸಿದ್ದೇನೆ. (ಅಂದರೆ ಪೌರ್ಣಮಿ, ಅಮಾವಾಸ್ಯೆ, ಚತುರ್ಥಿ, ಷಷ್ಟಿ, ಅಷ್ಠಮಿ, ಏಕಾದಶಿ, ಪ್ರದೋಷ ಮುಂತಾದವು ಯಾವ ಸಮದಿಂದ ಪ್ರಾರಂಬವಾಗಿ ಯಾವ ಸಮಯಕ್ಕೆ ಮುಕ್ತಾಯವಾಗುತ್ತದೆ ಎಂದು ನಿಖರವಾಗಿ ಇರುತ್ತದೆ)
5. ರಾಹುಕಾಲ, ಯಮಗಂಡ ಕಾಲ, ಗುಲಿಕ ಕಾಲವನ್ನು ಹರಿತ ನಾವು ಹೆಜ್ಜೆಯನ್ನು ಹಿಡಬೇಕು.
ಅದರ ಮಹತ್ವವನ್ನು ಕೆಲಗೆ ಕೊಟ್ಟಿದ್ದೇನೆ ಓದಿಕೊಳ್ಳಿ.
ರಾಹುಕಾಲ, ಯಮಗಂಡ ಕಾಲ, ಗುಲಿಕ ಕಾಲವನ್ನು ನೀವು ಯಾವ ಕ್ಯಾಲೇಂಡರ್ ನಲ್ಲಿ ನೋಡಿವಿರೋ ಅದು ಎಲ್ಲವು ತಪ್ಪು. ಯಾಕೆಂದರೆ ಎಲ್ಲಾ ಭಾನುವಾರಗಳಲ್ಲಿಯು ಒಂದೆ ಸಮಯದಲ್ಲಿ ರಾಹು ಕಾಲ ಬರುವುದಿಲ್ಲ, ಸೂರ್ಯ ಉದಯದ ಆದಾರದಮೇಲೆ ೩೬೫ ದಿನಗಳು ರಾಹುಕಾಲ, ಯಮಗಂಡ ಕಾಲ, ಗುಲಿಕ ಕಾಲ ವ್ಯತ್ಯಾಸ ವಾಗುತ್ತದೆ.
ಇದಕ್ಕೋಸ್ಕರ ಈ ಕ್ಯಾಲೆಂಡರ್ ನಲ್ಲಿ ೩೬೫ ದಿನಗಳಲ್ಲಿ ಬರುವ ರಾಹುಕಾಲ, ಯಮಗಂಡ ಕಾಲ, ಗುಲಿಕ ಕಾಲಗಳನ್ನು ನಿಖರವಾಗಿ ತಿಳಿಸಿದ್ದೇನೆ.
6. ಈ ಕ್ಯಾಲೆಂಡರ್ ಈಗ ಸಿದ್ಧವಾಗಿರುವುದರಿಂದ ಎಲ್ಲರಿಗು ಉಚಿತವಾಗಿ ವಿತರಣೆಯನ್ನು ಮಾಡುತ್ತಿದ್ದೇನೆ. ಬೇಕಾದವರು ನೇರವಾಗಿ ಬಂದು ತೆಗೆದುಕೊಳ್ಳಬಹುದು ಅಥವಾ ಕೊರಿಯರ್ ಮುಖಾಂತರ ಕಳುಹಿಸುತ್ತೇನೆ. ಇದನ್ನು ಎಲ್ಲೆರು ಉಪಯೋಗಿಸಿಕೊಳ್ಳಿ. (ಕೊರಿಯರ್ ಚಾರ್ಜ್ ೬೦ ರೂಗಳನ್ನು ಕೆಳಗಿರುವ ಸಂಖ್ಯೆಗೆ ಕಳುಹಿಸಿ ನಿಮ್ಮ ಪೂರ್ಣ ವಿಳಾಸವನ್ನು ಇದೆ ಸಂಕ್ಯೆಗೆ ಕಳುಹಿಸಿ. ದಯವಿಟ್ಟು ಯಾರು ಕರೆ ಮಾಡಬೇಡಿ. 888 494 0092).
7. ಈ ಕ್ಯಾಲೇಂಡರ್ ತೆಗೆದು ಕೊಂಡು ಹಿಂದು ಧರ್ಮವನ್ನು ಬೆಳೆಸಿ ಮತ್ತು ಉಳಿಸಿ.
8. ಈ ಕ್ಯಾಲೆಂಡರ್ ಅನ್ನು ಮೊದಲ ಬಾರಿ ಪ್ರಾರಂಭ ಮಾಡಿದ್ದೇನೆ, ಇದು ಪ್ರತಿವರ್ಷವು ಮುಂದುವರಿಯ ಬೇಕು ಎಂದು ಹಾರೈಸಿ, ಸಹಕರಿಸಿ.
9. ಇಂಥಾ ಉತ್ತಮವಾದ ಕ್ಯಾಲೆಂಡರ್ ನಲ್ಲಿ ನಿಮ್ಮ ಜಾಹಿರಾತುಗಳನ್ನು ಹಾಕಿ ಕೊಡುತ್ತೇನೆ. ಕನಿಷ್ಠ ೫೦೦ ಕ್ಯಾಲೆಂಡರ್ ಗಳನ್ನು ಮಾಡಿಸಬೇಕು.
10. ಇದನ್ನು ನಿಮ್ಮ ಎಲ್ಲಾ group ಗಳಿಗು share ಮಾಡಿ

1. ರಾಹು ಕಾಲ ಮಹತ್ವಃ-

ರಾಹುಕಾಲಕ್ಕೆ "ವಿಷಘಳಿಗೆ" ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ. ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.

ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

2. ಗುಳಿಕ ಕಾಲ ಮಹತ್ವಃ-

ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ. ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ.

ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ. ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ-ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ.

ಗುಳಿಕ ಕಾಲದ ಇನ್ನೊಂದು ಮಜವಾದ ವಿಷಯವೆಂದರೆ, ಮದುವೆಯ ಮುಹೂರ್ತವನ್ನು ಈ ಸಮಯದಲ್ಲಿ ಮಾಡುವುದಿಲ್ಲ. ಏಕೆಂದರೆ, ಮದುವೆ ಎಂಬುದು ಜೀವನದಲ್ಲಿ ಒಂದೇ ಬಾರಿ ಬರುವುದು. ಗುಳಿಕ ಕಾಲದಲ್ಲಿ ಮಾಡಿದರೆ? ಅರ್ಥವಾಗಿರಬಹುದು ಆಸ್ತಿಕರಿಗೆ!

3. ಯಮಗಂಡ ಕಾಲ

ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. ಈ ಸಮಯಕ್ಕೆ "ಸಾವಿನ ಸಮಯ" ಎಂದೂ ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ "ಎಳ್ಳು ನೀರು ಬಿಟ್ಟಂಗೆ!"

ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.

ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ!

ಈ ಕಾಲವನ್ನೆಲ್ಲಾ ನೋಡುತ್ತಾ ಹೋದರೆ ಜಗತ್ತೇ ಕೆಲವೊಮ್ಮೆ ಸ್ತಬ್ದವಾಗುತ್ತದೆ ಎನ್ನುವವರಿಗೆ, "ವಿನಾಶಕಾಲೇ ವಿಪರೀತ ಬುದ್ಧಿ" ಎಂದು "ತುಂಬಿ ಬಂದವರಿಗೆ" ಏನ್ ಹೇಳಬೇಕು? ಕೆಲ ದುರಂತ ಮತ್ತು ಅಪಘಾತ ಆಗಿರುವ ಸಮಯ ಮತ್ತು ಅವರು ಮನೆ ಬಿಟ್ಟ ಸಮಯವನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ.

29/12/2023
29/12/2023

Address

Rachamanahalli
Anekal
562106

Alerts

Be the first to know and let us send you an email when Acharya Book Store posts news and promotions. Your email address will not be used for any other purpose, and you can unsubscribe at any time.

Share

Category